Wednesday, 8th January 2025

Neeraj Chopra: ಡೋಪಿಂಗ್‌ ದೇಶದ ದೊಡ್ಡ ಸಮಸ್ಯೆ; ನೀರಜ್‌ ಚೋಪ್ರಾ

ನವದೆಹಲಿ: ಉದ್ದೀಪನ ಮದ್ದು ಸೇವನೆ ಭಾರತದ ಕ್ರೀಡಾಪಟುಗಳ ಅತಿ ದೊಡ್ಡ ಸಮಸ್ಯೆ, ಇದು ಸುಧಾರಿಸಿದರೆ ನಮ್ಮ ಕ್ರೀಡೆಯ ಮಟ್ಟವು ಉತ್ತಮಗೊಳ್ಳುತ್ತದೆ ಎಂದು ಒಲಿಂಪಿಕ್‌ ಚಾಂಪಿಯನ್‌ ಭಾರತದ ತಾರಾ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ನೀರಜ್‌, ‘ಡೋಪಿಂಗ್‌ ಎಂಬುದು ಒಮ್ಮೆ ಮನಸ್ಸಲ್ಲಿ ಬಂದರೆ, ಅದು ಭವಿಷ್ಯದಲ್ಲಿ ಮತ್ತಷ್ಟು ಕಾಡುತ್ತದೆ. ಡೋಪ್‌ ಸೇವಿಸಿದರೆ ಮಾತ್ರ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ಮೊದಲು ತಲೆಯಿಂದ ಕಿತ್ತು ಹಾಕಬೇಕು. ಕಠಿಣ ಪರಿಶ್ರಮ, ಆತ್ಮವಿಶ್ವಾಸ, ತರಬೇತುದಾರರ ಸರಿಯಾದ ಮಾರ್ಗದರ್ಶನವನ್ನು ಪಾಲಿಸಿದರೆ ಕ್ರೀಡಾಪಟುಗಳು ಅಂದುಕೊಂಡದ್ದನ್ನು ಸಾಧಿಸಬಹುದು’ ಎಂದು ಹೇಳಿದ್ದಾರೆ.

ಇದನ್ನೂ ಓದಿ Neeraj Chopra: ವಿಶ್ವ ಅಥ್ಲೆಟಿಕ್ ಮ್ಯೂಸಿಯಂ ಸೇರಿದ ನೀರಜ್‌ ಚೋಪ್ರಾ ಒಲಿಂಪಿಕ್ಸ್‌ ಜೆರ್ಸಿ

‘ನಿಜ ಹೇಳಬೇಕೆಂದರೆ, ಒಬ್ಬ ಕ್ರೀಡಾಪಟು ಡೋಪಿಂಗ್‌ನಲ್ಲಿ ಸಿಕ್ಕಿ ಬಿದ್ದ ಬಳಿಕ ಅವರು 2-4 ವರ್ಷಗಳ ನಿಷೇಧವನ್ನು ಎದುರಿಸಬೇಕು. ಈ ಶಿಕ್ಷೆಯನ್ನು ಮುಗಿಸಿ ಮತ್ತೆ ಕಮ್‌ಬ್ಯಾಕ್‌ ಮಾಡುವುದು ಅಸಾಧ್ಯ. ಏಕೆಂದರೆ ಅದಾಗಲೇ ಅವರ ಆತ್ಮವಿಶ್ವಾಸ, ಮತ್ತು ಕ್ರೀಡೆಯಲ್ಲಿನ ಆಸಕ್ತಿ ಕಳೆದು ಹೋಗಿರುತ್ತದೆ. ಆದ್ದರಿಂದ ಕ್ರೀಡಾಪಟುಗಳ ಮನಸ್ಥಿತಿ ಬದಲಾಗಬೇಕು. ಡೋಪಿಂಗ್‌ನಿಂದ ದೂರ ಇರಬೇಕು’ ಎಂದು ಚೋಪ್ರಾ ಅತ್ಯಮೂಲ್ಯ ಸಲಹೆ ನೀಡಿದರು.

ಚೋಪ್ರಾ(Neeraj Chopra) ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ(Paris Olympics) ಧರಿಸಿದ್ದ ಟೀ ಶರ್ಟ್ ಸ್ಪರ್ಧಾತ್ಮಕ ಕಲಾಕೃತಿಗಳ ವಿಶ್ವ ಅಥ್ಲೆಟಿಕ್ಸ್ ಪಾರಂಪರಿಕ ಸಂಗ್ರಹಾಲಯದಲ್ಲಿ(World Athletic Heritage Collection) ಪ್ರದರ್ಶನಕ್ಕಿರಿಸಲಾಗಿದೆ. ಈ ವಿಶೇಷ ಗೌರವಕ್ಕೆ ಪಾತ್ರರಾದ ವಿಶ್ವದ 23 ಅಥ್ಲೀಟ್‌ಗಳಲ್ಲಿ ನೀರಜ್ ಒಬ್ಬರೆನಿಸಿದ್ದಾರೆ. 2021ರ ಟೋಕಿಯೋ ಗೇಮ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ನೀರಜ್ ಕಳೆದ ವರ್ಷ(2024) ನಡೆದಿದ್ದ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

Leave a Reply

Your email address will not be published. Required fields are marked *