Saturday, 14th December 2024

ಪಾಕಿಸ್ತಾನ್ ಕ್ರಿಕೆಟ್‌: ಆಯ್ಕೆ ಸಮಿತಿ ನೂತನ ಮುಖ್ಯಸ್ಥ ಮೊಹಮ್ಮದ್ ವಾಸೀಂ

ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ನೂತನ ಮುಖ್ಯಸ್ಥರಾಗಿ ಮಾಜಿ ಆಟಗಾರ ಮೊಹಮ್ಮದ್ ವಾಸೀಂ ನೇಮಕಗೊಂಡಿದ್ದಾರೆ. 2023ರ ಏಕದಿನ ವಿಶ್ವಕಪ್ ಟೂರ್ನಿಯವರೆಗೆ ಇವರ ಅಧಿಕಾರಾವಧಿ ಇದೆ.

ಅಕ್ಟೋಬರ್‌ನಲ್ಲಿ ಮಿಸ್ಬಾ ಉಲ್ ಹಕ್ ಅವರು ಆಯ್ಕೆ ಸಮಿತಿಯ ಮುಖ್ಯಸ್ಥ ಸ್ಥಾನ ತೊರೆದಿದ್ದರು. ಅವರ ಸ್ಥಾನದಲ್ಲಿ ಈಗ 43 ವರ್ಷದ ವಾಸೀಂ ನೇಮಕಗೊಂಡಿದ್ದಾರೆ.

ಅಂತಿಮ ಸುತ್ತಿನ ಆನ್‌ಲೈನ್ ಸಂದರ್ಶನದ ನಂತರ ವಾಸೀಂ ಅವರ ನೇಮಕಾತಿಯನ್ನು ಮಂಡಳಿಯ ಅಧ್ಯಕ್ಷ ಎಹಸಾನ್‌ ಮಣಿ ಅನುಮೋದಿಸಿದ್ದಾರೆ’ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ.

ರಾವಲ್ಪಿಂಡಿಯ ವಾಸೀಂ 1996-2000ರ ಅವಧಿಯಲ್ಲಿ ಪಾಕಿಸ್ತಾನ ತಂಡದ ಪರ 18 ಟೆಸ್ಟ್ ಹಾಗೂ 25 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ಮಾದರಿಯಲ್ಲಿ ಅವರು ಒಟ್ಟು 783 ರನ್ ಕಲೆಹಾಕಿದ್ದರು.