Sunday, 15th December 2024

ಸಿಡಿದ ಬೌಲರುಗಳು: ಕಿವೀಸ್‌ ಐದು ವಿಕೆಟ್‌ ಪತನ

ಸೌತಾಂಪ್ಟನ್: ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಗೆಲುವು ಯಾರಿಗೆ ಎಂಬ ಕುತೂಹಲಕ್ಕೆ ಮಳೆರಾಯ ತಣ್ಣೀರೆರಚಿದ್ದಾನೆ. ಅದರೆ, ಟೀಂ ಇಂಡಿಯಾ ಬೌಲರುಗಳು ತಮ್ಮ ಕೈಚಳಕ ತೋರಿ, ಫಲಿತಾಂಶ ಸಾಧ್ಯತೆಯ ಟಾನಿಕ್‌ ನೀಡಿ ದ್ದಾರೆ.

ಟೀಂ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್(ಡಬ್ಲ್ಯುಟಿಸಿ) ಫೈನಲ್‌ ಪಂದ್ಯದ 5ನೇ ದಿನದಾಟವೂ ಮಳೆಯಿಂದಾಗಿ ತಡವಾಗಿ ಆರಂಭವಾಗಿದೆ.

ಸೌತಾಂಪ್ಟನ್‌ನ ಏಗಾಸ್ ಬೌಲ್‌ನಲ್ಲಿ ನಡೆಯುತ್ತಿರುವ ಪಂದ್ಯ ಮಳೆಯಿಂದಾಗಿ ಮೊದಲನೇ ಹಾಗೂ ನಾಲ್ಕನೇ ದಿನದಾಟ ಸ್ಥಗಿತಗೊಂಡಿತ್ತು.

ಸದ್ಯ ಮೊದಲ ಇನ್ನಿಂಗ್ಸ್ ನಲ್ಲಿ ನ್ಯೂಜಿಲ್ಯಾಂಡ್ 3 ವಿಕೆಟ್ ನಷ್ಟಕ್ಕೆ 117 ರನ್ ಬಾರಿಸಿದೆ. ಕಿವೀಸ್ ಪರ ಕೇನ್ ವಿಲಿಯಮ್ಸನ್ ಅಜೇಯ ೨೧ ರನ್ ಬಾರಿಸಿ ಆಡುತ್ತಿದ್ದಾರೆ. ಭೋಜನ ವಿರಾಮದ ಹೊತ್ತಿಗೆ ಐದು ವಿಕೆಟ್‌ ಕಳೆದುಕೊಂಡಿರುವ ಆತಿಥೇಯರಿಗೆ ಉಳಿದ ವಿಕೆಟ್‌ ನೆರವಿನಿಂದ ಪಂದ್ಯ ಡ್ರಾ ಮಾಡಲು ಹೋರಾಟ ನಡೆಸಬೇಕಿದೆ.

ಸ್ಪಷ್ಟ ಫಲಿತಾಂಶದ ನಿರೀಕ್ಷೆಯೊಂದಿಗೆ ಭಾರತ, ಜಡೇಜಾರನ್ನು ಬೌಲಿಂಗಿಗೆ ಕಣಕ್ಕಿಳಿಸಿದೆ. ನ್ಯೂಜಿಲ್ಯಾಂಡ್ ಮತ್ತು ಟೀಂ ಇಂಡಿಯಾ ನಡುವಿನ ಪಂದ್ಯದಲ್ಲಿ ಮೊದಲು ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾ 217 ರನ್ ಗಳಿಗೆ ಆಲೌಟ್ ಆಯಿತು.