Thursday, 14th November 2024

ವಿಂಡೀಸ್ ಏಕದಿನ, ಟಿ20 ತಂಡಕ್ಕೆ ನಿಕೋಲಸ್‌ ಪೂರಣ್‌ ನಾಯಕ

ಕಿಂಗ್‌ಸ್ಟನ್‌: ವೆಸ್ಟ್‌ ಇಂಡೀಸ್‌ ಏಕದಿನ ಹಾಗೂ ಟಿ20 ತಂಡಗಳ ನೂತನ ನಾಯಕ ನನ್ನಾಗಿ ವಿಕೆಟ್‌ ಕೀಪರ್‌ ಬ್ಯಾಟರ್‌ ನಿಕೋಲಸ್‌ ಪೂರಣ್‌ ಅವರನ್ನು ನೇಮಿಸ ಲಾಗಿದೆ. ಇತ್ತೀಚೆಗಷ್ಟೇ ನಿವೃತ್ತಿ ಹೊಂದಿದ ಕೈರನ್‌ ಪೊಲಾರ್ಡ್‌ ಸ್ಥಾನಕ್ಕೆ ಪೂರಣ್‌ ಆಯ್ಕೆಯಾದರು.

ಪೊಲಾರ್ಡ್‌ ನಾಯಕತ್ವದ ವೇಳೆ ಪೂರಣ್‌ ಉಪನಾಯಕರಾಗಿ ಕರ್ತವ್ಯ ನಿರ್ವಹಿಸು ತ್ತಿದ್ದರು. ಶಾಯಿ ಹೋಪ್‌ ಅವರನ್ನು ಏಕದಿನ ತಂಡದ ಉಪನಾಯಕನನ್ನಾಗಿ ಆರಿಸ ಲಾಗಿದೆ.

ತಂಡವನ್ನು ಮುನ್ನಡೆಸುವ ಅವಕಾಶ ಲಭಿಸಿದ್ದು ನನ್ನ ಪಾಲಿನ ಮಹಾನ್‌ ಗೌರವ. ಇದೊಂದು ಪ್ರತಿಷ್ಠಿತ ಹುದ್ದೆ. ವಿಂಡೀಸ್‌ ಕಂಡ ದೈತ್ಯ ಹಾಗೂ ಯಶಸ್ವಿ ನಾಯಕರ ಹಾದಿಯಲ್ಲಿ ತಂಡವನ್ನು ಮುನ್ನಡೆಸುವುದು ನನ್ನ ಯೋಜನೆ’ ಎಂಬುದಾಗಿ ನಿಕೋಲಸ್‌ ಪ್ರತಿಕ್ರಿಯಿಸಿದ್ದಾರೆ. ಸದ್ಯ ಅವರು ಐಪಿಎಲ್‌ನಲ್ಲಿ ಸನ್‌ರೈಸರ್ ಹೈದರಾಬಾದ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಇದೇ ತಿಂಗಳು ನೆದರ್ಲೆಂಡ್ಸ್‌ ಪ್ರವಾಸಗೈಯುವ ಮೂಲಕ ಪೂರಣ್‌ ಅವರ ವೆಸ್ಟ್‌ ಇಂಡೀಸ್‌ ನಾಯಕತ್ವದ ಆರಂಭವಾಗಲಿದೆ.