ನವದೆಹಲಿ: ಮುಂದಿನ ತಿಂಗಳು ಆರಂಭಗೊಳ್ಳಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ(Champions Trophy 2025) ಟೂರ್ನಿಯಲ್ಲಿ ಜಸ್‌ಪ್ರೀತ್ ಬುಮ್ರಾ(Jasprit Bumrah) ಭಾರತ ತಂಡದ ಉಪನಾಯಕರಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ. ಸಿಡ್ನಿ ಟೆಸ್ಟ್ ವೇಳೆ ಬೆನ್ನುನೋವಿನ ಸಮಸ್ಯೆ ಎದುರಿಸಿದ ಕಾರಣ ಬುಮ್ರಾ ತವರಿನ ಇಂಗ್ಲೆಂಡ್ ಎದುರಿನ ಟಿ20 ಮತ್ತು ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎನ್ನಲಾಗಿದೆ.
ಆಸೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬುಮ್ರಾ 32 ವಿಕೆಟ್ ಕಬಳಿಸಿದ್ದರು. ಬೆನ್ನುನೋವಿನಿಂದಾಗಿ ಸರಣಿಯ ಕೊನೇ ಇನಿಂಗ್ಸ್ನಲ್ಲಿ ಅವರು ಬೌಲಿಂಗ್ ಮಾಡಿರಲಿಲ್ಲ. ಹೀಗಾಗಿ ಅವರ ಕಾರ್ಯದೊತ್ತಡ ತಗ್ಗಿಸಲು ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಎಲ್ಲ ಪಂದ್ಯಗಳಲ್ಲಿ ಆಡಿಸುವ ಸಾಧ್ಯತೆ ಇಲ್ಲ.
ಭಾರತದ ಪಂದ್ಯಗಳು ತಟಸ್ಥ ತಾಣವಾದ ದುಬೈನಲ್ಲಿ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ 2025ರ ಫೆಬ್ರವರಿ 23ರಂದು ದುಬೈನಲ್ಲಿ ನಡೆಯಲಿದೆ. ಫೆಬ್ರವರಿ 19ರಂದು ಆತಿಥೇಯ ಹಾಗೂ ಹಾಲಿ ಚಾಂಪಿಯನ್ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಕರಾಚಿಯಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ.
ಇದನ್ನೂ ಓದಿ ಇನ್ನೂ ಕಾಮಗಾರಿ ಸ್ಥಿತಿಯಲ್ಲಿದೆ ಪಾಕ್ ಕ್ರಿಕೆಟ್ ಸ್ಟೇಡಿಯಂ; ಚಾಂಪಿಯನ್ಸ್ ಟ್ರೋಫಿ ನಡೆಯುವುದೇ? ಎಂದ ನೆಟ್ಟಿಗರು
19 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಭಾರತ ಒಳಗೊಂಡ 3 ಲೀಗ್ ಪಂದ್ಯಗಳು ಮತ್ತು ಒಂದು ಸೆಮಿಫೈನಲ್ ಪಂದ್ಯ ದುಬೈನಲ್ಲಿ ನಿಗದಿಯಾಗಿದೆ. ಟೂರ್ನಿಯ ಉಳಿದ 9 ಲೀಗ್ ಮತ್ತು ಇನ್ನೊಂದು ಸೆಮಿಫೈನಲ್ ಪಂದ್ಯ ಪಾಕಿಸ್ತಾನದ ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್ನಲ್ಲಿ ನಿಗದಿಯಾಗಿವೆ. 2ನೇ ಸೆಮಿಫೈನಲ್ ಮಾರ್ಚ್ 2ರಂದು ಲಾಹೋರ್ನಲ್ಲಿ ನಿಗದಿಯಾಗಿದೆ. ಟೂರ್ನಿಯಲ್ಲಿ ಆಡುವ 8 ತಂಡಗಳನ್ನು ತಲಾ 4ರಂತೆ 2 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ರೌಂಡ್ ರಾಬಿನ್ ಲೀಗ್ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್ಗೇರಲಿವೆ.
ವೇಳಾಪಟ್ಟಿ
ಫೆ.19 ಪಾಕಿಸ್ತಾನ-ನ್ಯೂಜಿಲ್ಯಾಂಡ್, ಸ್ಥಳ: ಕರಾಚಿ
ಫೆ. 20 ಬಾಂಗ್ಲಾದೇಶ-ಭಾರತ, ಸ್ಥಳ: ದುಬೈ
ಫೆ. 21 ಅಫ್ಘಾನಿಸ್ತಾನ-ದ. ಆಫ್ರಿಕಾ, ಸ್ಥಳ: ಕರಾಚಿ
ಫೆ. 22 ಆಸ್ಟ್ರೆಲಿಯಾ-ಇಂಗ್ಲೆಂಡ್, ಸ್ಥಳ: ಲಾಹೋರ್
ಫೆ. 23 ಭಾರತ-ಪಾಕಿಸ್ತಾನ,ಸ್ಥಳ: ದುಬೈ
ಫೆ. 24 ಬಾಂಗ್ಲಾದೇಶ-ನ್ಯೂಜಿಲ್ಯಾಂಡ್, ಸ್ಥಳ: ರಾವಲ್ಪಿಂಡಿ
ಫೆ. 25 ಅಸ್ಟ್ರೆಲಿಯಾ-ದ. ಆಫ್ರಿಕಾ,ಸ್ಥಳ: ರಾವಲ್ಪಿಂಡಿ
ಫೆ. 26 ಅಫ್ಘಾನಿಸ್ತಾನ-ಇಂಗ್ಲೆಂಡ್,ಸ್ಥಳ: ಲಾಹೋರ್
ಫೆ. 27 ಪಾಕಿಸ್ತಾನ-ಬಾಂಗ್ಲಾದೇಶ,ಸ್ಥಳ: ರಾವಲ್ಪಿಂಡಿ
ಫೆ. 28 ಅಫ್ಘಾನಿಸ್ತಾನ-ಆಸ್ಟ್ರೆಲಿಯಾ,ಸ್ಥಳ: ಲಾಹೋರ್
ಮಾ. 1 ದಣ ಆಫ್ರಿಕಾ-ಇಂಗ್ಲೆಂಡ್,ಸ್ಥಳ: ಕರಾಚಿ
ಮಾ. 2 ಭಾರತ-ನ್ಯೂಜಿಲ್ಯಾಂಡ್, ಸ್ಥಳ: ದುಬೈ
ಮಾ. 4 ಸೆಮಿಫೈನಲ್-1, ಸ್ಥಳ: ದುಬೈ
ಮಾ. 5 ಸೆಮಿಫೈನಲ್-2, ಸ್ಥಳ: ಲಾಹೋರ್
ಮಾ. 9 ಫೈನಲ್ -ಸ್ಥಳ: ದುಬೈ/ಲಾಹೋರ್