Monday, 16th September 2024

ಭಾರಿ ಮೊತ್ತದತ್ತ ಕಿವೀಸ್

ಹೈದರಾಬಾದ್: ನ್ಯೂಜಿಲೆಂಡ್ ಮತ್ತು ನೆದರ್ಲ್ಯಾಂಡ್ಸ್ ತಂಡಗಳು ಸೋಮವಾರ ವಿಶ್ವಕಪ್‌ನಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಟಾಸು ಗೆದ್ದ ನೆದರ್‌ ಲ್ಯಾಂಡ್ ಬೌಲಿಂಗ್ ಆಯ್ಕೆ ಮಾಡಿದೆ.

ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.

ನ್ಯೂಜಿಲೆಂಡ್​ ತಮ್ಮ ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಮೇಲುಗೈ ಸಾಧಿಸಿದ ನಂತರ ತಮ್ಮ ಮನೋ ಬಲ ಹೆಚ್ಚಿಸಿಕೊಂಡಿದೆ. ಟಾಮ್ ಲ್ಯಾಥಮ್ ನೇತೃತ್ವದ ನ್ಯೂಜಿಲೆಂಡ್ ತಂಡ ನೆದರ್ಲ್ಯಾಂಡ್ಸ್ ವಿರುದ್ಧ ವಿಶ್ವಕಪ್​ ಅಭಿಯಾನದಲ್ಲಿ ಸತತ ಎರಡನೇ ಗೆಲುವಿನ ನಿರೀಕ್ಷೆಯಲ್ಲಿದೆ.

ನ್ಯೂಜಿಲೆಂಡ್ ತಂಡ ನಾಯಕ ಕೇನ್ ವಿಲಿಯಮ್ಸನ್ ಅನುಪಸ್ಥಿತಿಯ ಹೊರತಾಗಿಯೂ ಗುರುವಾರ ಇಂಗ್ಲೆಂಡ್ ಅನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿತು. ಇಂಗ್ಲೆಂಡ್ ಒಂಬತ್ತು ವಿಕೆಟ್ ನಷ್ಟಕ್ಕೆ 282 ರನ್ ಗಳಿಸಿತು. ಆದರೆ, ಡೆವೊನ್ ಕಾನ್ವೆ ಅವರ ಬಿರುಸಿನ 152 ಮತ್ತು ರಚಿನ್ ರವೀಂದ್ರ ಅವರ 123 ರನ್‌ಗಳ ಅಬ್ಬರದ ಇನ್ನಿಂಗ್ಸ್​ನಿಂದ ನ್ಯೂಜಿಲೆಂಡ್​ ತಂಡ ಇಂಗ್ಲೆಂಡ್​ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು.

ಇತ್ತೀಚಿನ ವರದಿ ಪ್ರಕಾರ, ನ್ಯೂಜಿಲೆಂಡ್ ತಂಡ ಐದು ವಿಕೆಟ್ ನಷ್ಟಕ್ಕೆ 247 ರನ್‌ ಗಳಿಸಿ, ಇನ್ನಿಂಗ್ಸ್ ಮುಂದು ವರೆಸಿದೆ. ಆರಂಭಿಕ ವಿಲ್ ಯಂಗ್ (70) ಹಾಗೂ ರಚಿನ್ ರವೀಂದ್ರ (51) ಅರ್ಧಶತಕ ಗಳಿಸಿದ್ದಾರೆ.

ನೆದರ್ಲ್ಯಾಂಡ್ಸ್ ಬಳಗ: ನಾಯಕ ಸ್ಕಾಟ್ ಎಡ್ವರ್ಡ್ಸ್, ಕಾಲಿನ್ ಅಕರ್ಮನ್, ವೆಸ್ಲಿ ಬ್ಯಾರೆಸಿ, ಬಾಸ್ ಡಿ ಲೀಡ್, ಆರ್ಯನ್ ದತ್, ಸೈಬ್ರಾಂಡ್ ಎಂಗಲ್ಬ್ರೆಕ್ಟ್, ರಿಯಾನ್ ಕ್ಲೈನ್, ತೇಜಾ ನಿಡಮನೂರು, ಮ್ಯಾಕ್ಸ್ ಒ’ಡೌಡ್, ಸಾಕಿಬ್ ಜುಲ್ಫಿಕರ್, ಶರೀಜ್ ಅಹ್ಮದ್, ಲೊಗನ್ಫ್ವಾನ್ ಬೆಕ್ ವ್ಯಾನ್ ಡೆರ್ ಮೆರ್ವೆ, ಪಾಲ್ ವ್ಯಾನ್ ಮೀಕೆರೆನ್, ವಿಕ್ರಮಜಿತ್ ಸಿಂಗ್.

ನ್ಯೂಜಿಲೆಂಡ್ ಬಳಗ: ನಾಯಕ ಕೇನ್ ವಿಲಿಯಮ್ಸನ್, ಟಾಮ್ ಲ್ಯಾಥಮ್, ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ (ಡಬ್ಲ್ಯೂ), ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ವಿಲ್ ಯಂಗ್.

Leave a Reply

Your email address will not be published. Required fields are marked *