Sunday, 5th January 2025

Vijender Singh: ಒಲಿಂಪಿಕ್ಸ್‌ ಪದಕ ವಿಜೇತ ಬಾಕ್ಸರ್‌ ವಿಜೇಂದರ್‌ ಸಿಂಗ್‌ಗೆ ಪಿತೃ ವಿಯೋಗ!

Olympic Medal Winning Boxer Vijender Singh's Father Mahipal Singh Passes Away

ನವದೆಹಲಿ: ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ (Vijender Singh) ಅವರ ತಂದೆ ಮಹಿಪಾಲ್ ಸಿಂಗ್ ಗುರುವಾರ ನಿಧನರಾಗಿದ್ದಾರೆ. ಕಳೆದ ಕೆಲವು ವಾರಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. 2008ರ ಬೀಜಿಂಗ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದ 39ರ ವಯಸ್ಸಿನ ಬಾಕ್ಸರ್‌ ತನ್ನ ತಂದೆಯ ಅಂತ್ಯಕ್ರಿಯೆಯನ್ನು ಹರಿಯಾಣದ ತನ್ನ ಸ್ಥಳೀಯ ಗ್ರಾಮ ಭಿವಾನಿಯಲ್ಲಿ ನಡೆಸಲಾಗುವುದು ಎಂದು ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಹರಿಯಾಣ ರೋಡ್‌ವೇಸ್‌ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮಹಿಪಾಲ್, ಓವರ್‌ಟೈಮ್ ಕೆಲಸ ಮಾಡುವ ಮೂಲಕ ವಿಜೇಂದರ್ ಅವರ ಕನಸನ್ನು ನನಸಾಗಿಸಿದ್ದರು. “ನಮ್ಮ ತಂದೆ ಮಹಿಪಾಲ್ ಸಿಂಗ್ ಅವರ ನಿಧನವನ್ನು ನಾವು ಬಹಳ ದುಃಖದಿಂದ ಘೋಷಿಸುತ್ತೇವೆ. ಅವರು ಇಂದು ನಮ್ಮನ್ನು ತೊರೆದು ತಮ್ಮ ಸ್ವರ್ಗ ನಿವಾಸಕ್ಕೆ ತೆರಳಿದ್ದಾರೆ,” ಎಂದು ವಿಜೇಂದರ್‌ ಸಿಂಗ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದಾರೆ.

ಕಳೆದ ವರ್ಷ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಗೊಂಡಿದ್ದ ವಿಜೇಂದರ್‌ ಸಿಂಗ್‌, ತಮ್ಮ ತಂದೆಯೊಂದಿಗಿನ ಚಿತ್ರವನ್ನು ಪೋಸ್ಟ್ ಮಾಡಿ, “ನಿಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳಲ್ಲಿ ಅವರನ್ನು ಇರಿಸಿಕೊಳ್ಳಲು ನಾವು ವಿನಂತಿಸುತ್ತೇವೆ,” ಎಂದು ಬರೆದಿದ್ದರು.

2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚು

ವಿಜೇಂದರ್ ಅವರಿಗೆ 2009 ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಲಾಗಿತ್ತು. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ಬರೆದಿದ್ದರು. ಈ ಪಂದ್ಯಗಳಲ್ಲಿ ಪದಕ ಗೆದ್ದ ಮೊದಲ ಭಾರತೀಯ ಬಾಕ್ಸರ್. ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಎರಡನೇ ಭಾರತೀಯ ಅಥ್ಲಿಟ್‌ ಎಂಬ ದಾಖಲೆಯನ್ನು ಕೂಡ ಬರೆದಿದ್ದರು.

ವಿಜೇಂದರ್ ಅವರ ತಂದೆ ಬಸ್ ಚಾಲಕ

1985ರ ಅಕ್ಟೋಬರ್ 29ರಂದು ಹರಿಯಾಣದ ಭಿವಾನಿಯಲ್ಲಿ ಜನಿಸಿದ್ದ ವಿಜೇಂದರ್ ಅವರ ತಂದೆ ಮಹಿಪಾಲ್ ಸಿಂಗ್ ಹರಿಯಾಣ ರೋಡ್‌ವೇನಲ್ಲಿ ಬಸ್ ಚಾಲಕರಾಗಿದ್ದರು. ಅವರ ತಾಯಿ ಗೃಹಿಣಿ. ವಿಜೇಂದರ್ ಅತ್ಯಂತ ಕೆಳ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು. ವಿಜೇಂದರ್ ಸಿಂಗ್ ತಮ್ಮ ಕಾಲೇಜು ದಿನಗಳಿಂದಲೂ ಬಾಕ್ಸಿಂಗ್ ಮತ್ತು ಕುಸ್ತಿಯಲ್ಲಿ ಒಲವು ಹೊಂದಿದ್ದರು, ಅವರು ಭಿವಾನಿ ಬಾಕ್ಸಿಂಗ್ ಕ್ಲಬ್‌ನಲ್ಲಿ ಅಭ್ಯಾಸ ಮಾಡುತ್ತಿದ್ದರು. ಅವರು ಭಾರತೀಯ ಬಾಕ್ಸಿಂಗ್ ಕೋಚ್ ಗುರ್ಬಕ್ಷ್ ಸಿಂಗ್ ಸಂಧು ಅವರಿಂದ ತರಬೇತಿಯನ್ನು ಪಡೆದರು.

ಈ ಸುದ್ದಿಯನ್ನು ಓದಿ: Champions Trophy: ಕರಾಚಿ ಆತಿಥ್ಯದ ಪಂದ್ಯಗಳು ಸ್ಥಳಾಂತರ!