Sunday, 15th December 2024

ಭಾರತಕ್ಕೆ ಮೊದಲ ಆಘಾತ: ಶೂನ್ಯಕ್ಕೆ ಶಾ ಔಟ್‌

ಅಡಿಲೇಡ್: ಅಡಿಲೇಡ್ ನಲ್ಲಿ ಆರಂಭವಾಗಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಾಸ್ ಗೆದ್ದಿರುವ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಆಸಿಸ್ ಪ್ರವಾಸದಲ್ಲಿ ಏಕದಿನ ಸರಣಿ ಕಳೆದುಕೊಂಡರೂ ಟಿ20 ಸರಣಿಯನ್ನು ತಮ್ಮದಾಗಿಸಿಕೊಂಡಿರುವ ಭಾರತ ತಂಡ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಮೇಲುಗೈ ಸಾಧಿಸುವ ಹುಮ್ಮಸ್ಸಿನಲ್ಲಿದೆ.

ಬ್ಯಾಟಿಂಗ್‌ ಆರಂಭಿಸಿದ ಭಾರತಕ್ಕೆ ಆಸೀಸ್‌ ವೇಗಿ ಮಿಚೆಲ್‌ ಸ್ಟಾರ್ಕ್‌ ಮೊದಲ ಆಘಾತವಿಕ್ಕಿದರು. ಯುವ ಬ್ಯಾಟ್ಸ್ಮನ್‌ ಪೃಥ್ವಿ ಶಾ ರನ್‌ ಗಳಿಸದೆ, ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿ ಬೌಲ್ಡ್‌ ಆದರು. ಬಳಿಕ ಬಂದ ಚೇತೇಶ್ವರ ಪೂಜಾರ, ಇನ್ನಷ್ಟು ಆಘಾತವಾಗ ದಂತೆ ರಕ್ಷಣಾತ್ಮಕ ಆಟದ ಮೊರೆ ಹೋಗಿದ್ದಾರೆ.

ಇತ್ತೀಚಿನ ವರದಿ ಪ್ರಕಾರ, ಭಾರತ ಒಂದು ವಿಕೆಟ್ ನಷ್ಟಕ್ಕೆ 12 ಓವರುಗಳಲ್ಲಿ 25 ರನ್ ಗಳಿಸಿತ್ತು. ಇನ್ನಿಂಗ್ಸ್‌ನ ಏಕೈಕ ಬೌಂಡರಿ ಯನ್ನು ಆರಂಭಿಕ ಮಯಾಂಕ್‌ ಅಗರ್ವಾಲ್‌ ಸಿಡಿಸಿದ್ದಾರೆ.