ಕೇಪ್‌ಟೌನ್: ನಾಯಕ ಶಾನ್ ಮಸೂದ್ ಅವರ ಐತಿಹಾಸಿಕ ಶತಕದಿಂದಾಗಿ ಪಾಕಿಸ್ತಾನ ತಂಡ, ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲಿ (PAK vs SA) ಕಮ್‌ಬ್ಯಾಕ್ ಮಾಡಿದೆ. ಭೋಜನ ವಿರಾಮದ ಹೊತ್ತಿಗೆ ಪಾಕಿಸ್ತಾನ, ಮೂರು ವಿಕೆಟ್ ಕಳೆದುಕೊಂಡು 312 ರನ್ ಗಳಿಸಿದೆ. 137 ರನ್ ಗಳಿಸಿ ಅಜೇಯ ಆಟವಾಡುತ್ತಿದ್ದ ಶಾನ್ ಮಸೂದ್ ಇದೀಗ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಶತಕ ಸಿಡಿಸಿದ ಪಾಕಿಸ್ತಾನದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಸೂದ್ ನ್ಯೂಲ್ಯಾಂಡ್ಸ್‌ನಲ್ಲಿ ತಮ್ಮ ವೃತ್ತಿಜೀವನದ ಆರನೇ ಟೆಸ್ಟ್ ಶತಕವನ್ನು ಪೂರ್ಣಗೊಳಿಸಿದ್ದಾರೆ.
ಶಾನ್ ಮಸೂದ್‌ಗೂಮುನ್ನ ಸಲೀಂ ಮಲಿಕ್ 1995 ರಲ್ಲಿ ದಕ್ಷಿಣ ಆಫ್ರಿಕಾ ನೆಲದಲ್ಲಿ 99 ರನ್ ಗಳಿಸಿ ಔಟಾಗಿ ಕೇವಲ ಒಂದು ರನ್‌ನಿಂದ ಶತಕ ವಂಚಿತರಾಗಿದ್ದರು. ಇದರ ನಂತರ, 2007ರಲ್ಲಿ ಇಂಜಮಾಮ್-ಉಲ್-ಹಕ್ ದಕ್ಷಿಣ ಆಫ್ರಿಕಾದಲ್ಲಿ ಶತಕ ಬಾರಿಸಿದ ಮೊದಲ ಪಾಕಿಸ್ತಾನಿ ನಾಯಕನಾಗುವ ಅವಕಾಶವನ್ನು ಹೊಂದಿದ್ದರು, ಆದರೆ ಇನ್ನೊಂದು ತುದಿಯಿಂದ ಬೆಂಬಲದ ಕೊರತೆಯಿಂದಾಗಿ ಅವರು 92 ರನ್ ಗಳಿಸಿ ಅಜೇಯರಾಗಿ ಪೆವಿಲಿಯನ್‌ಗೆ ಮರಳಿದ್ದರು.
CENTURY FOR OUR CAPTAIN 💯🫡@shani_official has played a sublime innings to rack up his sixth Test ton 🤩#SAvPAK pic.twitter.com/Y3mL7qFbKm
— Pakistan Cricket (@TheRealPCB) January 5, 2025
ದಕ್ಷಿಣ ಆಫ್ರಿಕಾದಲ್ಲಿ ಪಾಕಿಸ್ತಾನ ನಾಯಕರ ವೈಯಕ್ತಿಕ ಗರಿಷ್ಠ ಮೊತ್ತ
ಶಾನ್ ಮಸೂದ್: 2025 ರಲ್ಲಿ 102*
ಸಲೀಂ ಮಲಿಕ್: 1995 ರಲ್ಲಿ 99
ಇಂಜಮಾಮ್-ಉಲ್-ಹಕ್: 2007 ರಲ್ಲಿ 92*
ಮಿಸ್ಬಾ-ಉಲ್-ಹಕ್: 2013 ರಲ್ಲಿ 64
ಸರ್ಫರಾಜ್ ಅಹ್ಮದ್: 2019 ರಲ್ಲಿ 56
ಫೈನಲ್‌ಗೆ ಲಗ್ಗೆ ಇಟ್ಟಿರುವ ದಕ್ಷಿಣ ಆಫ್ರಿಕಾ
ಶಾನ್ ಮಸೂದ್ ಜೊತೆಗೆ ಬಾಬರ್ ಆಝಮ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಇವರು 124 ಎಸೆತಗಳಲ್ಲಿ 81 ರನ್‌ಗಳನ್ನು ಕಲೆ ಹಾಕಿದ್ದರು, ಆದರೆರ, ಅವರು ಕೇವಲ 19 ರನ್‌ಗಳ ಅಂತರದಲ್ಲಿ ಶತಕ ವಂಚಿತರಾದರು. ಇವರಿಬ್ಬರೂ ಮುರಿಯದ ಮೊದಲ ವಿಕೆಟ್‌ಗೆ 205 ರನ್‌ಗಳ ಜೊತೆಯಾಟವಿದ್ದರು.
ಮೂರನೇ ದಿನದ ಆಟ ಮುಗಿಯುವ ಮುನ್ನವೇ ವೇಗದ ಬೌಲರ್ ಮಾರ್ಕೊ ಯೆನ್ಸನ್, ಬಾಬರ್ ಆಝಮ್ ಅವರನ್ನು ಔಟ್ ಮಾಡಿದರು. ಪ್ರಥಮ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ 615 ರನ್‌ಗಳಿಗೆ ಉತ್ತರವಾಗಿ ಪಾಕಿಸ್ತಾನ ಕೇವಲ 194 ರನ್‌ಗಳಿಗೆ ಆಲೌಟ್ ಆಗಿತ್ತು. ಆ ಮೂಲಕ ಪಾಕಿಸ್ತಾನವು ಫಾಲೋ-ಆನ್‌ಗೆ ಸಿಲಕಬೇಕಾಯಿತು. ಈ ಸರಣಿಯ ಮೊದಲನೇ ಪಂದ್ಯವನ್ನು ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾ ಜೂನ್‌ನಲ್ಲಿ ದಿ ಲಾರ್ಡ್ಸ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಅಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
ಈ ಸುದ್ದಿಯನ್ನು ಓದಿ: Jasprit Bumrah: ಇಂಗ್ಲೆಂಡ್ ವಿರುದ್ಧದ ಸರಣಿ; ಬುಮ್ರಾಗೆ ವಿಶ್ರಾಂತಿ?