Wednesday, 4th December 2024

PAK vs ZIM: ಕೇವಲ 16 ಎಸೆತಗಳಲ್ಲಿ 5 ವಿಕೆಟ್‌ ಸಾಧನೆ ಮಾಡಿದ ಸೂಫಿಯನ್‌ ಮುಖೀಮ್‌!

PAK vs ZIM: Pakistan Sufiyan Muqeem Take Five Wickets In Just 16 Balls Against Zimbabwe See Record

ನವದೆಹಲಿ: ಟಿ20 ಕ್ರಿಕೆಟ್‌ನಲ್ಲಿ ಸಾಮಾನ್ಯವಾಗಿ ಅಭಿಮಾನಿಗಳು ಸಾಕಷ್ಟು ಬೌಂಡರಿ ಮತ್ತು ಸಿಕ್ಸರ್‌ಗಳನ್ನು ನೋಡುತ್ತಾರೆ. ವಿಶೇಷವಾಗಿ ಈ ಸ್ವರೂಪದಲ್ಲಿ ಬ್ಯಾಟ್ಸ್‌ಮನ್‌ಗಳು ಪ್ರಾಬಲ್ಯ ಹೊಂದಿದ್ದಾರೆಂಬುದು ಸತ್ಯ. ಸ್ವಲ್ಪ ಮಟ್ಟಿಗೆ ಇದು ನಿಜ, ಆದರೆ 20 ಓವರ್‌ಗಳ ಪಂದ್ಯದಲ್ಲಿ ಬೌಲರ್‌ಗಳು ತಮ್ಮ ಮ್ಯಾಜಿಕ್ ನೋಡುವುದು ಬಹಳ ಅಪರೂಪ. ಪಾಕಿಸ್ತಾನ ಮತ್ತು ಜಿಂಬಾಬ್ವೆ ನಡುವೆ (PAK vs ZIM) ನಡೆದಿದ್ದ ಟಿ20 ಪಂದ್ಯದಲ್ಲೂ ಇಂಥದ್ದೇ ಘಟನೆ ನಡೆದಿದೆ. ಉಭಯ ತಂಡಗಳ ನಡುವಣ ಮೂರು ಪಂದ್ಯಗಳ ಸರಣಿಯ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನದ ಸ್ಪಿನ್ನರ್ ಸುಫಿಯಾನ್ ಮುಖೀಮ್ ತಮ್ಮ ಸ್ಪಿನ್‌ ಮ್ಯಾಜಿಕ್ ಬಳಸಿ ದೊಡ್ಡ ದಾಖಲೆಯನ್ನು ಬರೆದಿದ್ದಾರೆ.

ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ತಂಡ ಜಿಂಬಾಬ್ವೆಯನ್ನು 10 ವಿಕೆಟ್‌ಗಳಿಂದ ಸೋಲಿಸಿದೆ. ಈ ಗೆಲುವಿನೊಂದಿಗೆ ಪಾಕಿಸ್ತಾನ ತಂಡ ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಪಾಕಿಸ್ತಾನದ ಪರ ಸ್ಪಿನ್ನರ್ ಸೂಫಿಯಾನ್ ಮುಖೀಮ್ ಗೆಲುವಿನ ಹೀರೋ ಎನಿಸಿಕೊಂಡರು. ಟಿ20ಐ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಸ್ಪೆಲ್ ಮಾಡಿದ ಪಾಕಿಸ್ತಾನದ ಬೌಲರ್‌ ಎಂಬ ಸಾಧನೆಗೆ ಸೂಫಿಯಾನ್ ಮುಖೀಮ್ ಭಾಜನರಾಗಿದ್ದಾರೆ.

ಕೇವಲ 16 ಎಸೆತಗಳಲ್ಲಿ 5 ವಿಕೆಟ್‌ ಕಿತ್ತ ಸೂಫಿಯನ್

ಸೂಫಿಯಾನ್ ಮುಖೀಮ್ ತನ್ನ ಬಿಗಿಯಾದ ಬೌಲಿಂಗ್‌ನಿಂದ ಅತ್ಯಂತ ಕಡಿಮೆ ರನ್‌ಗಳನ್ನು ನೀಡುವ ಮೂಲಕ ಐದು ವಿಕೆಟ್‌ ಸಾಧನೆ ಮಾಡಿದರು. ಈ ಪಂದ್ಯದಲ್ಲಿ ಪಾಕಿಸ್ತಾನದ ಪರವಾಗಿ ಸೂಫಿಯಾನ್ ಕೇವಲ 2.4 ಓವರ್‌ಗಳನ್ನು ಅಂದರೆ ಕೇವಲ 16 ಎಸೆತಗಳನ್ನು ಬೌಲ್ ಮಾಡಿದರು, ಇದರಲ್ಲಿ ಅವರು ಪಾಕಿಸ್ತಾನದ ಐವರು ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು. ಇದರಲ್ಲಿ ಪ್ರಮುಖ ವಿಷಯವೆಂದರೆ ಸೂಫಿಯಾನ್ ಅವರು ಎದುರಾಳಿ ಜಿಂಬಾಬ್ವೆ ತಂಡಕ್ಕೆ ಕೇವಲ 3 ರನ್‌ ಮಾತ್ರ ನೀಡಿದರು. ಸೂಫಿಯಾನ್ ಅವರ ಸ್ಪಿನ್‌ ಮೋಡಿಗೆ ನಲುಗಿದ ಜಿಂಬಾಬ್ವೆ ತಂಡ ಅತ್ಯಂತ ಕಡಿಮೆ ಮೊತ್ತಕ್ಕೆ ಕುಸಿಯಿತು.

57 ರನ್‌ಗಳಿಗೆ ಜಿಂಬಾಬ್ವೆ ಆಲ್‌ಔಟ್‌

ಪಾಕಿಸ್ತಾನದ ಮಾರಕ ಬೌಲಿಂಗ್‌ನಿಂದಾಗಿ ಜಿಂಬಾಬ್ವೆ ತಂಡ ಕೇವಲ 12.4 ಓವರ್‌ಗಳಲ್ಲಿ ಕೇವಲ 57 ರನ್‌ಗಳಿಗೆ ಆಲ್‌ಔಟ್‌ ಆಯಿತು. ಇದು ಟಿ20ಐ ಕ್ರಿಕೆಟ್‌ನಲ್ಲಿ ಜಿಂಬಾಬ್ವೆ ತಂಡದ ಅತ್ಯಂತ ಕಡಿಮೆ ಮೊತ್ತವಾಗಿದೆ. ಜಿಂಬಾಬ್ವೆ ತಂಡದ ಪರ ಆರಂಭಿಕ ಬ್ಯಾಟ್ಸ್‌ಮನ್‌ ಬ್ರಿಯಾನ್‌ ಬೆನೆಟ್‌ (21 ರನ್‌) ಹಾಗೂ ಟಿ ಮಾರು ಮಣಿ ( 16 ರನ್‌) ಅವರನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವೈಯಕ್ತಿಕ ಎರಡಂಕಿ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು.

ಪಾಕಿಸ್ತಾನ ತಂಡಕ್ಕೆ 10 ವಿಕೆಟ್‌ ಜಯ

ಇದಕ್ಕೆ ಉತ್ತರವಾಗಿ ಪಾಕಿಸ್ತಾನ 5.3 ಓವರ್‌ಗಳಲ್ಲಿ 61 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು. ಟಿ20ಐ ಮಾದರಿಯಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿದ ದಾಖಲೆ ಕೂಡ ಜಿಂಬಾಬ್ವೆ ತಂಡದ ಹೆಸರಿನಲ್ಲಿದೆ. ಜಿಂಬಾಬ್ವೆ ಟಿ20ಐ ಪಂದ್ಯದಲ್ಲಿ 344 ರನ್ ಗಳಿಸಿದೆ.‌

ಈ ಸುದ್ದಿಯನ್ನು ಓದಿ: PAK vs ZIM 1st T20I Highlights