Thursday, 12th December 2024

ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡ ಪ್ರಕಟ

ರಾಚಿ: ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಭುಜದ ಗಾಯದಿಂದಾಗಿ ನಸೀಮ್ ಶಾ ಟೂರ್ನಿಯಿಂದ ಹೊರಗುಳಿದಿದ್ದಾರೆ. ಬಲಗೈ ವೇಗಿ ಹಸನ್ ಅಲಿ, ನಸೀಮ್ ಅವರ ಬದಲಿ ಆಟಗಾರನಾಗಿ ತಂಡಕ್ಕೆ ಮರಳಿದ್ದಾರೆ.

ಹ್ಯಾರಿಸ್ ರೌಫ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಬಾಬರ್ ಅಜಮ್ ತಂಡವನ್ನು ಮುನ್ನಡೆಸುತ್ತಿದ್ದು, ಫಖರ್ ಜಮಾನ್ ಕೂಡ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಫಖರ್ ಜಮಾನ್ 2023 ರ ವಿಶ್ವಕಪ್ನಲ್ಲಿ ಸ್ಥಾನ ಪಡೆಯುತ್ತಾರೆಯೇ ಎಂಬ ಅನುಮಾನಗಳಿದ್ದವು. ಏಷ್ಯಾಕಪ್ ತಂಡದಿಂದ ಹೊರಗುಳಿದಿದ್ದ ಸೌದ್ ಶಕೀಲ್ ಬಹುರಾಷ್ಟ್ರೀಯ ಟೂರ್ನಮೆಂಟ್ ಗಾಗಿ ತಂಡಕ್ಕೆ ಮರಳಿದ್ದಾರೆ. ವೇಗಿ ಜಮಾನ್ ಖಾನ್, ಸ್ಪಿನ್ನರ್ ಅಬ್ರಾರ್ ಅಹ್ಮದ್ ಮತ್ತು ಮೊಹಮ್ಮದ್ ಹ್ಯಾರಿಸ್ ಮೀಸಲು ಆಟಗಾರರಾಗಿ ತಂಡದೊಂದಿಗೆ ಪ್ರಯಾಣಿಸಲಿದ್ದಾರೆ.

ಹೀಗಿದೆ ಪಾಕಿಸ್ತಾನ ತಂಡ

ಫಖರ್ ಜಮಾನ್, ಇಮಾಮ್ ಉಲ್ ಹಕ್, ಅಬ್ದುಲ್ಲಾ ಶಫೀಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್, ಇಫ್ತಿಖರ್ ಅಹ್ಮದ್, ಆಘಾ ಸಲ್ಮಾನ್, ಮೊಹಮ್ಮದ್ ನವಾಜ್, ಶದಾಬ್ ಖಾನ್( ಉಪ ನಾಯಕ), ಉಸಾಮಾ ಮಿರ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರವೂಫ್, ಮೊಹಮ್ಮದ್ ವಾಸಿಮ್ ಜೂನಿಯರ್, ಹಸನ್ ಅಲಿ.