Monday, 16th September 2024

ಪಾಕಿಸ್ತಾನದ ರನ್‌ ಚೇಸಿಗೆ ಮಳೆ ಅಡ್ಡಿ

ಬೆಂಗಳೂರು: ರಚಿನ್ ರವೀಂದ್ರ ಶತಕ ಮತ್ತು ಕೇನ್ ವಿಲಿಯಮ್ಸನ್ ಅವರ ಬೃಹತ್​ ಅರ್ಧಶತಕದ ನೆರವಿನಿಂದ ಕಿವೀಸ್​ ತಂಡ ಪಾಕಿಸ್ತಾನದ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 402 ರನ್​​ಗಳ ಬೃಹತ್​ ಮೊತ್ತ ನೀಡಿದೆ.

ಪ್ರತಿಯಾಗಿ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು ಒಂದು ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿದೆ. ಈ ಹೊತ್ತಿನಲ್ಲಿ ಮಳೆ ಸುರಿದ ಕಾರಣ, ಪಂದ್ಯ ಸ್ಥಗಿತ ಗೊಂಡಿತ್ತು. ಪಾಕಿಸ್ತಾನ್ ಆರಂಭಿಕ ಜಮಾನ್ ಶತಕ ಬಾರಿಸಿದ್ದು, ಅವರಿಗೆ ನಾಯಕ ಬಾಬರ್‌ ಜತೆ ನೀಡುತ್ತಿದ್ದಾರೆ.

ಇದಕ್ಕೂ ಮೊದಲು ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡ ಪಾಕಿಸ್ತಾನಕ್ಕೆ ಕಿವೀಸ್​ ಬ್ಯಾಟರ್​ಗಳ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗ ಲಿಲ್ಲ. ನಿಗದಿತ ಓವರ್​ ಅಂತ್ಯಕ್ಕೆ ನ್ಯೂಜಿಲೆಂಡ್​ 6 ವಿಕೆಟ್​ ನಷ್ಟಕ್ಕೆ 401 ರನ್​ ಗಳಿಸಿದೆ.

ಟಾಸ್​​ ಸೋತು ಮೊದಲು ಬ್ಯಾಟಿಂಗ್​ ಇಳಿದ ಕಿವೀಸ್​ಗೆ 68ರನ್​​ಗಳ ಮೊದಲ ವಿಕೆಟ್​ ಜೊತೆಯಾಟದಿಂದ ಬಲ ಬಂದಿತು. ವಿಲಿಯಮ್ಸನ್​ ತಂಡಕ್ಕೆ ಮರಳಿದ್ದರಿಂದ ಯಂಗ್​ ಅವರನ್ನು ತಂಡದಿಂದ ಹೊರಗಿಟ್ಟು, ರಚಿನ್ ರವೀಂದ್ರ ಮತ್ತು ಡೆವೊನ್ ಕಾನ್ವೆ ಆರಂಭಿಕರಾಗಿ ಮೈದಾನಕ್ಕಿಳಿದಿದ್ದರು. 35 ರನ್​ ಮಾಡಿ ಉತ್ತಮ ಆರಂಭ ನೀಡಿದ್ದ ಡೆವೊನ್ ಕಾನ್ವೆ ಹಸನ್​ ಅಲಿ ಬೌಲ್​ನಲ್ಲಿ ವಿಕೆಟ್​ ಒಪ್ಪಿಸಿದರು. ಈ ವಿಕೆಟ್​ನಿಂದ 68 ರನ್​ಗಳ​ ಮೊದಲ ವಿಕೆಟ್​ ಜೊತೆಯಾಟ ಬ್ರೇಕ್​​ ಆಯಿತು.

ಕೇನ್​ ಜೊತೆಗೆ ಎರಡನೇ ವಿಕೆಟ್​ಗೆ ಪಾಲುದಾರಿಕೆ ಹಂಚಿಕೊಂಡ ರಚಿನ್​ ರವೀಂದ್ರ ನಡೆಯುತ್ತಿರುವ ವಿಶ್ವಕಪ್​ನಲ್ಲಿ ಮೂರನೇ ಶತಕ ದಾಖಲಿಸಿದರು. ಇನ್ನಿಂಗ್ಸ್​ನಲ್ಲಿ ರಚಿನ್​ 94 ಬಾಲ್​ ಆಡಿ 15 ಬೌಂಡರಿ, 1 ಸಿಕ್ಸ್​​ನಿಂದ 108 ರನ್​ಗಳನ್ನು ಬಾರಿಸಿ​ ಔಟ್​ ಆದರು.

ನಂತರ ಬಂದ ಡೇರಿಲ್ ಮಿಚೆಲ್ (29), ಮಾರ್ಕ್ ಚಾಪ್ಮನ್ (39) ಮತ್ತು ಗ್ಲೆನ್ ಫಿಲಿಪ್ಸ್(41) ದೊಡ್ಡ ಇನ್ನಿಂಗ್ಸ್​ ಆಡದಿದ್ದರೂ ಅಂತಿಮ 15 ಓವರ್​ಗಳಲ್ಲಿ ಬಿರುಸಿನ ಬ್ಯಾಟಿಂಗ್​ ಮಾಡಿದರು. ಅಂತಿಮ ಓವರ್​ಗಳಲ್ಲಿ ಮಿಚೆಲ್ ಸ್ಯಾಂಟ್ನರ್ (26) ಮತ್ತು ಟಾಮ್ ಲ್ಯಾಥಮ್ (2) ಅಜೇಯ ಆಟದಿಂದ ಕಿವೀಸ್ 400ರ ಗಡಿ ದಾಟಿತು.

Leave a Reply

Your email address will not be published. Required fields are marked *