ಮುಂಬೈ: ಟಿ20 ತಂಡದ ನಾಯಕತ್ವದ ಬಳಿಕ ಏಕದಿನ ತಂಡದ ನಾಯಕತ್ವದ ಹೊಣೆಗಾರಿಕೆಯನ್ನೂ ರೋಹಿತ್ ಶರ್ಮಾರಿಗೆ ನೀಡಲಾಗಿದೆ. ಸದ್ಯ ಟಿ20 ತಂಡದ ಉಪನಾಯಕ ಸ್ಥಾನವನ್ನು ಕೆ.ಎಲ್.ರಾಹುಲ್ ಗೆ ನೀಡಲಾಗಿದೆ.
ಹಿಂದೆ ಮೂರು ಮಾದರಿಯ ತಂಡಕ್ಕೆ ನಾಯಕನಾಗಿದ್ದ ವಿರಾಟ್ ಕೊಹ್ಲಿ ಅವರಿಗೆ ಟೆಸ್ಟ್ ನಾಯಕತ್ವದಲ್ಲಿ ಮಾತ್ರ ಮುಂದು ವರಿಸಲಾಗಿದೆ. ವಿಕೆಟ್ ಕೀಪರ್ ಬ್ಯಾಟ್ಸಮನ್ ರಿಷಭ್ ಪಂತ್ ಅವರನ್ನು ಟೆಸ್ಟ್ ತಂಡದಲ್ಲಿ ಬೆಳೆಸುವ ಇರಾದೆಯಲ್ಲಿ ಬಿಸಿಸಿಐ ಇದೆ. ವಿರಾಟ್ ಬಳಿಕ ಟೆಸ್ಟ್ ತಂಡದ ನಾಯಕನನ್ನಾಗಿ ರಿಷಭ್ ಪಂತ್ ರನ್ನು ಮಾಡಲಾಗುತ್ತದೆ ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.
ದಕ್ಷಿಣ ಆಫ್ರಿಕಾ ಸರಣಿಗೆ ಪ್ರಕಟಿಸಲಾದ ತಂಡದಲ್ಲಿ ರೋಹಿತ್ ಶರ್ಮಾ ಅವರಿಗೆ ಟೆಸ್ಟ್ ತಂಡದ ಉಪ ನಾಯಕನ ಜವಾಬ್ದಾರಿ ನೀಡಲಾಗಿದೆ. ಅಜಿಂಕ್ಯ ರಹಾನೆ ಅವರನ್ನು ಪ್ರವಾಸಕ್ಕೆ ಆಯ್ಕೆ ಮಾಡಲಾಗಿದೆಯಾದರೂ ಉಪ ನಾಯಕನ ಸ್ಥಾನದಿಂದ ತೆಗೆಯ ಲಾಗಿದೆ. ಏಕದಿನ ತಂಡಕ್ಕೂ ಕೆ.ಎಲ್.ರಾಹುಲ್ ಅವರನ್ನೇ ಉಪ ನಾಯಕರನ್ನಾಗಿ ಆಯ್ಕೆ ಮಾಡಲಾಗುತ್ತದೆ ಎಂದು ವರದಿ ತಿಳಿಸಿದೆ.