Thursday, 12th December 2024

Paris Paralympics: ಏಷ್ಯನ್ ದಾಖಲೆಯೊಂದಿಗೆ ಪ್ಯಾರಿಸ್‌ನಲ್ಲಿ ಚಿನ್ನ ಗೆದ್ದ ಪ್ರವೀಣ್‌ ಕುಮಾರ್‌

Paris Paralympics

ಪ್ಯಾರಿಸ್‌: ಪ್ಯಾರಾಲಿಂಪಿಕ್ಸ್‌ನಲ್ಲಿ(Paris Paralympics) ಭಾರತದ ಪದಕ ಖಾತೆಗೆ ಮತ್ತೂಂದು ಪದಕ ಸೇರ್ಪಡೆಯಾಗಿದೆ. ಪುರುಷರ ಎತ್ತರ ಜಿಗಿತ T64 ವಿಭಾಗದಲ್ಲಿ ಪ್ರವೀಣ್‌ ಕುಮಾರ್‌(Praveen Kumar) ಏಷ್ಯಾನ್‌ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಆದರೆ, ಪುರುಷರ ಜಾವೆಲಿನ್ ಥ್ರೋ F54 ಫೈನಲ್‌ನಲ್ಲಿ ಭಾರತದ ದೀಪೇಶ್ ಕುಮಾರ್(Dipesh Kumar) 7ನೇ ಸ್ಥಾನ ಪಡೆಯುವ ಮೂಲಕ ಪದಕ ಗೆಲ್ಲುವಲ್ಲಿ ವಿಫಲರಾದರು.

ಶುಕ್ರವಾರ ನಡೆದ ಪುರುಷರ ಎತ್ತರ ಜಿಗಿತ T64 ಫೈನಲ್‌ ಪಂದ್ಯದಲ್ಲಿ ಪ್ರವೀಣ್‌ ಕುಮಾರ್‌ 2.08 ಮೀ ದೂರ ಜಿಗಿದು ಚಿನ್ನ ಗೆದ್ದರು. ಇದು ಪ್ರವೀಣ್‌ ಗೆದ್ದ ಸತತ 2ನೇ ಪ್ಯಾರಾಲಿಂಪಿಕ್ಸ್‌ ಪದಕವಾಗಿದೆ. ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಅತ್ಯುತ್ತಮ 2.07 ಮೀಟರ್‌ಗಳೊಂದಿಗೆ ಬೆಳ್ಳಿ ಗೆದ್ದಿದ್ದರು. ಈ ಬಾರಿ ತಮ್ಮದೇ ದಾಖಲೆಯನ್ನು ಉತ್ತಮಪಡಿಸುದರ ಜತೆಗೆ ಏಷ್ಯನ್‌ ದಾಖಲೆಯೊಂದಿಗೆ ಚಿನ್ನ ಗೆದ್ದು ಸಂಭ್ರಮಿಸಿದರು. ಈ ಸಾಧನೆಯೊಂದಿಗೆ, ಪ್ರವೀಣ್ ಪ್ಯಾರಿಸ್‌ನಲ್ಲಿ ಪದಕ ಗೆದ್ದ ಮೂರನೇ ಭಾರತೀಯ ಹೈಜಂಪರ್ ಎನಿಸಿಮೊಂಡರು. ಇದಕ್ಕೂ ಮುನ್ನ ಶರದ್ ಕುಮಾರ್ ಬೆಳ್ಳಿ, ಮರಿಯಪ್ಪನ್ ತಂಗವೇಲು ಪುರುಷರ ಹೈಜಂಪ್ ಟಿ63 ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದರು.

ಇದನ್ನೂ ಓದಿ Kapil Parmar : ಪ್ಯಾರಾಲಿಂಪಿಕ್ಸ್‌ ಜೋಡೋದಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ಬರೆದ ಕಪಿಲ್ ಪರ್ಮಾರ್‌

ಉತ್ತರ ಪ್ರದೇಶದ ನೋಯ್ಡಾದ 21 ವರ್ಷದ ಅಥ್ಲೀಟ್ ಮರಿಯಪ್ಪನ್ ತಂಗವೇಲು ನಂತರ ಪ್ಯಾರಾಲಿಂಪಿಕ್ ಎತ್ತರ ಜಿಗಿತ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದ ಎರಡನೇ ಭಾರತೀಯರಾದರು. ಅಮೆರಿಕದ ಡೆರೆಕ್ ಲೊಸಿಡೆಂಟ್ 2.06 ಮೀ ಜಿಗಿತದೊಂದಿಗೆ ಬೆಳ್ಳಿ ಗೆದ್ದರೆ, ಉಜ್ಬೇಕಿಸ್ತಾನದ ತೆಮುರ್ಬೆಕ್ ಗಿಯಾಜೊವ್ 2.03 ಮೀ ಜಿಗಿತದೊಂದಿಗೆ ಕಂಚಿನ ಪದಕ ಪಡೆದರು. ಸದ್ಯ ಭಾರತ 26 ಪದಕ ಗೆದ್ದ ಸಾಧನೆ ಮಾಡಿದೆ. 6 ಚಿನ್ನ, 9 ಬೆಳ್ಳಿ ಮತ್ತು 11 ಕಂಚು ಒಳಗೊಂಡಿದೆ. ಇನ್ನೂ ಕೆಲ ಸ್ಫರ್ಧೆಯಲ್ಲಿ ಭಾರತೀಯ ಕ್ರೀಡಾಪಟುಗಳು ಪದಕ ಸುತ್ತಿಗೆ ಪ್ರವೇಶಿಸಿದ ಕಾರಣ 30ರ ಗಡಿ ದಾಟುವ ನಿರೀಕ್ಷೆ ಇದೆ.

ಗುರುವಾರ ನಡೆದಿದ್ದ ಜೂಡೋ ಪುರುಷರ 60 ಕೆಜಿ ಜೆ1 ವಿಭಾಗದಲ್ಲಿ ಭಾರತದ ಕಪಿಲ್‌ ಪರ್ಮಾರ್‌ ಕಂಚು ಗೆದ್ದಿದ್ದರು. ಈ ಮೂಲಕ ಪ್ಯಾರಾಲಿಂಪಿಕ್ಸ್‌ ಮತ್ತು ಒಲಿಂಪಿಕ್ಸ್‌ ಇತಿಹಾಸದಲ್ಲೇ ಜೂಡೋದಲ್ಲಿ ಭಾರತಕ್ಕೆ ಲಭಿಸಿದ ಚೊಚ್ಚಲ ಪದಕ ಗೆದ್ದ ಸಾಧನೆ ಮಾಡಿದ್ದರು. 24 ವರ್ಷದ ಮಧ್ಯಪ್ರದೇಶದ ಕಪಿಲ್‌ ಪರ್ಮಾರ್‌, ಇಪ್ಪಾನ್‌ ಕೌಶಲ ದಲ್ಲಿ ಎತ್ತಿದ ಕೈ. ಇದೇ ಕೌಶಲ ಬಳಸಿ ಕೊಂಡು ಗುರುವಾರ ಕೂಡ ಕಪಿಲ್‌ ಕೇವಲ 33 ಸೆಕೆಂಡ್‌ಗಳಲ್ಲೇ ಎದುರಾಳಿ ಎಲಿಯೆಲ್ಟನ್‌ ಅವರನ್ನು ಮಣಿಸಿ ಗಮನ ಸೆಳೆದಿದ್ದರು.