Thursday, 21st November 2024

ಕ್ವಾರಂಟೈನ್ ಗೆ ಹಿಂದೇಟು: ಟೀಂ ಇಂಡಿಯಾ ಆಟಗಾರರಿಗೆ ಎಚ್ಚರಿಕೆ

ಬ್ರಿಸ್ಬೇನ್: ಕ್ವೀನ್ಸ್ ಲೆಂಡ್ ಆರೋಗ್ಯ ಸಚಿವೆ ರೋಸ್ ಬೇಟ್ಸ್, ಕೊರೊನಾ ನಿಯಮವನ್ನು ಎಲ್ಲರೂ ಪಾಲಿಸಲೇಬೇಕು. ಒಂದು ವೇಳೆ ಪಾಲಿಸುವುದಿಲ್ಲ ಎಂದಾದರೆ ಟೀಂ ಇಂಡಿಯಾ ಆಟಗಾರರು ಇಲ್ಲಿಗೆ ಬರುವುದೇ ಬೇಡ ಎಂದು ಸಂದೇಶ ರವಾನಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಕಠಿಣ ಕೋವಿಡ್ ನಿಯಮ ಪಾಲಿಸುತ್ತಿರುವ ಕಾರಣ, ಕ್ವಾರಂಟೈನ್ ಗೆ ಹಿಂದೇಟು ಹಾಕುತ್ತಿರುವ ಟೀಂ ಇಂಡಿಯಾ ಆಟಗಾರರಿಗೆ ಕ್ವೀನ್ಸ್ ಲೆಂಡ್ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.

ಆಸ್ಟ್ರೇಲಿಯಾದಲ್ಲಿ ಏಕದಿನ, ಟಿ-20, ಎರಡು ಟೆಸ್ಟ್ ಸರಣಿ ಪಂದ್ಯಗಳನ್ನು ಆಡಿರುವ ಟೀಂ ಇಂಡಿಯಾ, ಕೊನೆಯ ಟೆಸ್ಟ್ ಪಂದ್ಯ ವನ್ನು ಕ್ವೀನ್ಸ್ ಲೆಂಡ್ ನ ಬ್ರಿಸ್ಬೇನ್ ನಲ್ಲಿ ಆಡಲಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಕೊರೊನಾ ನಿಯಮ ಪಾಲಿಸಲೇಬೇಕಾಗಿದೆ. ಆದರೆ ಆಟಗಾರರು ಒಪ್ಪುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ದುಬೈನಲ್ಲಿ 14 ದಿನ ಕ್ವಾರಂಟೈನ್ ಆಗಿದ್ದು, ಆಸ್ಟ್ರೇಲಿಯಾಗೆ ಬಂದ ಬಳಿಕವೂ 14 ದಿನ ಕ್ವಾರಂಟೈನ್ ಆಗಿದ್ದೇವೆ. ಇದೀಗ ಬ್ರಿಸ್ಬೇನ್ ನಲ್ಲಿಯೂ ಮತ್ತೆ ಕ್ವಾರಂಟೈನ್ ಗೆ ಒಳಪಡಬೇಕು ಎಂದರೆ ಸಾಧ್ಯವಲ್ಲ ಎಂದು ಟೀಂ ಇಂಡಿಯಾ ಆಟಗಾರರು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.