ಅಬುದಾಬಿ: ಐಪಿಎಲ್ ಟೂರ್ನಿಯ ಲೀಗ್ ಹಂತ ಅಂತಿಮ ಹಂತದಲ್ಲಿ ಮುಂಬೈ ಹೊರತುಪಡಿಸಿ ಪ್ಲೇ ಆಫ್‌ಗೆ ಟಿಕೆಟ್ ಪಡೆ ಯುವ ತಂಡಗಳು ಇನ್ನೂ ಖಚಿತವಾಗಿಲ್ಲ. ಅಂತಿಮ ಎರಡು ಪಂದ್ಯಗಳು ಮಾತ್ರವೇ ಬಾಕಿಯಿದೆ.
ಸೋಮವಾರ ನಡೆಯುವ ಡೆಲ್ಲಿ ಹಾಗೂ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಒಂದು ತಂಡ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ.
ಆರ್‌ಸಿಬಿ ಹಾಗೂ ಡೆಲ್ಲಿ ತಂಡಗಳು ಕಠಿಣ ಹೋರಾಟ ನಡೆಸಲಿದ್ದು ಗೆಲುವು ಸಾಧಿಸುವ ತಂಡ ನೇರವಾಗಿ ಪ್ಲೇ ಆಫ್‌ಗೆ ಟಿಕೆಟ್ ಪಡೆಯಲಿದೆ. ಎರಡು ತಂಡಗಳು ತಲಾ 7 ಗೆಲುವು ಸಾಧಿಸಿ 14 ಅಂಕಗಳನ್ನು ಬುಟ್ಟಿಗೆ ಸೇರಿಸಿಕೊಂಡಿದೆ. ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆಯಿಡಲಿದೆ.
ಮುಂಬೈ ವಿರುದ್ಧದ ಪಂದ್ಯದಲ್ಲಿ ಹೈದರಾಬಾದ್ ಶರಣಾದರೆ ಸೋಮವಾರದ ಬೆಂಗಳೂರು vs ಡೆಲ್ಲಿ ಪಂದ್ಯದಲ್ಲಿ ಸೋಲು ಕಂಡ ತಂಡವೂ ಕೂಡ ಪ್ಲೇ ಆಫ್‌ಗೆ ಟಿಕೆಟ್ ಪಡೆಯಲಿದೆ. ಆದರೆ ಹೈದರಾಬಾದ್ ಗೆದ್ದರೆ ರನ್‌ರೇಟ್ ನಿರ್ಣಾಯಕ ಪಾತ್ರ ವಹಿಸ ಲಿದೆ.
ಹೈದರಾಬಾದ್ ತಂಡದ ರನ್‌ರೇಟ್ ಉತ್ತಮವಾಗಿದ್ದು ಮುಂಬೈ ವಿರುದ್ಧದ ಪಂದ್ಯದಲ್ಲಿ ಗೆಲ್ಲುವುದರ ಜೊತೆಗೆ ರನ್‌ರೇಟ್‌ಅನ್ನು ಕೂಡ ಕಾಪಾಡಿಕೊಳ್ಳಬೇಕಿದೆ. ಹೀಗಾಗಿ ಅಂತಿಮ ಎರಡು ಪಂದ್ಯಗಳಲ್ಲಿ ನಾಲ್ಕು ತಂಡಗಳ ಭವಿಷ್ಯ ನಿರ್ಧಾರವಾಗಲಿದೆ.
ಸೋಲುವ ತಂಡ ಟೂರ್ನಿಯಿಂದ ತಕ್ಷಣವೇ ಹೊರಬೀಳದಿದ್ದರೂ ಉಳಿದಿರುವ ಕಡೆಯ ಒಂದು ಪಂದ್ಯದ ಫಲಿತಾಂಶದ ಆಧಾರದಲ್ಲಿ ತನ್ನ ಪ್ಲೇಆಫ್ ಸ್ಥಾನವನ್ನು ನಿರ್ಧರಿಸಲಿದೆ. ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡ ಮಂಗಳವಾರ ಅಂತಿಮ ಲೀಗ್ ಪಂದ್ಯವು ನಿರ್ಣಾಯಕವಾಗಿರಲಿದೆ.
ಎರಡೂ ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದ್ದು, ಗೆದ್ದ ತಂಡ ಪ್ಲೇ-ಆಫ್ ಸುತ್ತಿಗೆ ಆಯ್ಕೆಯಾಗಲಿದ್ದು, ಸೋತವರಿಗೆ ರನ್‌ರೇಟ್ ನಿರ್ಣಾಯಕ ಪಾತ್ರ ವಹಿಸಲಿದೆ. ಅಲ್ಲದೇ ಸೋತ ತಂಡದ ಹಣೆ ಬರಹ ಹೈದರಾಬಾದ್ ತಂಡದ ಸೋಲು ಅಥವಾ ಗೆಲು ವಿನ ಮೇಲೆ ನಿರ್ಧಾರವಾಗಲಿದೆ.
ಆರಂಭದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಡೆಲ್ಲಿ ಸತತ ನಾಲ್ಕು ಪಂದ್ಯಗಲ್ಲಿ ಸೋಲು ಕಂಡಿದ್ರೆ, ಬೆಂಗಳೂರು ತಂಡ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಅಸ್ಥಿರ ಪ್ರದರ್ಶನವೇ ಇತ್ತಂಡಗಳಿಗೆ ಮುಳುವಾಗಿದೆ.
ಬೆಂಗಳೂರು ತಂಡದ ಆರಂಭಿಕ ಆಟಗಾರರ ಪಡಿಕ್ಕಲ್ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ, ಫಿಲಿಪ್ಪೆ ಕೂಡ ಕಳೆದ ಎರಡು ಪಂದ್ಯಗಳಲ್ಲಿ ಮಿಚಿದ್ದಾರೆ. ಆದರೆ ವಿರಾಟ್ ಮತ್ತು ವಿಲಿಯರ್ಸ್ ನಿರ್ಗಮನದ ನಂತರ ಇನ್ನಿಂಗ್ಸ್ ಕಟ್ಟುವ ಆಟಗಾರರಿಲ್ಲ. ಮಧ್ಯಮ ಕ್ರಮಾಂಕ ಬಲಿಷ್ಟವಾಗಿಲ್ಲದಿರುವುದೇ ತಂಡಕ್ಕೆ ಹಿನ್ನಡೆ ಉಂಟುಮಾಡಿದೆ.
ಆರ್‌ಸಿಬಿ ಬೌಲಿಂಗ್ ಪಡೆ ಮೋರಿಸ್ ಮತ್ತು ಚಹಾಲ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಆರಂಭದಲ್ಲಿ ಅಮೋಘ ಪ್ರದರ್ಶನ ತೋರಿದ್ದ ಡೆಲ್ಲಿ, ಅಂತಿಮ ಹಂತದಲ್ಲಿ ಸತತ ಸೋಲಿನಿಂದ ಕಂಗೆಟ್ಟು ಪ್ಲೇ – ಆಫ್ ಹಂತಕ್ಕೇರಲು ಹೆಣಗಾಡುತ್ತಿದೆ. ಬ್ಯಾಟ್ಸ್ಮನ್ಗಳ ವೈಫಲ್ಯ ತಂಡಕ್ಕೆ ದೊಡ್ಡ ತಲೆನೋವಾಗಿದೆ.