Thursday, 19th September 2024

ಕ್ರಿಸ್ಟಿಯಾನೋ ರೊನಾಲ್ಡೋಗೆ ಕೊರೋನಾ ಸೋಂಕು ದೃಢ

ನವದೆಹಲಿ: ಪೋರ್ಚುಗಲ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಅವರಿಗೆ ಕೊರೋನಾ ವೈರಸ್ ಸೋಂಕು ಒಕ್ಕರಿಸಿದೆ.

ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಫೋರ್ಚುಗೀಸ್ ಫುಟ್ಬಾಲ್ ಫೆಡರೇಷನ್, ರೊನೋಲ್ಡೋ ಅವರಿಗೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿಲ್ಲ, ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದೆ. ಪೋರ್ಚುಗಲ್ ರಾಷ್ಟ್ರೀಯ ತಂಡದ ಪರವಾಗಿ ಆಡು ತ್ತಿರುವ ರೊನಾಲ್ಡೋ, ನಿಯಮದಂತೆ ಪರೀಕ್ಷೆಗೊಳಪಟ್ಟಿದ್ದರು. ಅದರ ವರದಿ ಬಂದಿದ್ದು, ರೊನಾಲ್ಡೋಗೆ ಸೋಂಕು ಒಕ್ಕರಿಸಿ ರುವುದು ದೃಢವಾಗಿದೆ.

ಪ್ರಸ್ತುತ ರೊನಾಲ್ಡೋ ಅವರು ಐಸೊಲೇಷನ್ ನಲ್ಲಿದ್ದು, ಬುಧವಾರ ನಡೆಯಲಿರುವ ಸ್ವೀಡನ್ ವಿರುದ್ಧದ ಪಂದ್ಯಕ್ಕೆ ರೊನಾಲ್ಡೋ ಅಲಭ್ಯರಾಗಲಿದ್ದಾರೆ ಎಂದು ಫುಟ್ಬಾಲ್ ಫೆಡರೇಷನ್ ಹೇಳಿದೆ.

ಫುಟ್ ಬಾಲ್ ಇತಿಹಾಸದಲ್ಲೇ ತಂಡವೊಂದರ ಪರ ಅತೀ ಹೆಚ್ಚು ಗೋಲು ಗಳಿಸಿರುವ ಆಟಗಾರರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ರೊನಾಲ್ಡೋ ಪೋರ್ಚುಗಲ್ ಪರ 101 ಗೋಲುಗಳನ್ನು ಬಾರಿಸಿದ್ದಾರೆ. ಬ್ರೆಜಿಲ್ ಫಾರ್ವರ್ಡ್ ನೇಮಾರ್, ಜರ್ಮೈನ್ ತಂಡದ ಸಹ ಆಟಗಾರ ಕೈಲಿಯನ್ ಎಂಬಪ್ಪೆ ಮತ್ತು ಇಬ್ರಾಹಿ ಮೊವಿಕ್ ಕೂಡ ಸೋಂಕಿಗೆ ತುತ್ತಾಗಿದ್ದರು.