ಉದಯಪುರ: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು(PV Sindhu) ಅವರು ಉದ್ಯಮಿ ವೆಂಕಟ ದತ್ತ ಸಾಯಿ(Venkatta Datta Sai) ಜತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಸಾಂಪ್ರದಾಯಿಕವಾಗಿ ವಿವಾಹ ಕಾರ್ಯಕ್ರಮಗಳು ನಡೆಯಿತು. ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನವ ಜೋಡಿಗೆ ಹಲವು ಕ್ರೀಡಾ, ಸಿನಿಮಾ ತಾರೆಯರು ಸೇರಿ ಅಭಿಮಾನಿಗಳು ಕೂಡ ಶುಭ ಹಾರೈಸಿದ್ದಾರೆ. ಶನಿವಾರದಂದು ನಿಶ್ಚಿತಾರ್ಥ ನಡೆದಿತ್ತು.
ಡಿಸೆಂಬರ್ 24ರಂದು ಹೈದರಾಬಾದ್ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ವಿದೇಶಾಂಗ ಸಚಿವ ಜೈಶಂಕರ್, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಸಹಿತ ಗಣ್ಯರನ್ನು ಸಿಂಧು ಈಗಾಗಲೆ ಆಹ್ವಾನಿಸಿದ್ದಾರೆ. 2 ವಾರಗಳ ಹಿಂದೆ ಲಖನೌದಲ್ಲಿ ಪಿವಿ ಸಿಂಧು, ಸಯ್ಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿ ಜಯಿಸುವ ಮೂಲಕ ಎರಡೂವರೆ ವರ್ಷಗಳ ಪ್ರಶಸ್ತಿ ಬರ ನೀಗಿಸಿಕೊಂಡಿದ್ದರು.
ಪಿ.ವಿ. ಸಿಂಧು, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಒಂದು ಚಿನ್ನ (2019) ಸೇರಿದಂತೆ ಐದು ಪದಕಗಳನ್ನು ಗೆದ್ದಿದ್ದಾರೆ. 2016ರ ರಿಯೊ ಒಲಿಂಪಿಕ್ಸ್ ಹಾಗೂ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸತತ ಎರಡು ಪದಕಗಳ ಸಾಧನೆ ಮಾಡಿದ್ದಾರೆ. 2017ರಲ್ಲಿ ಜೀವನಶ್ರೇಷ್ಠ ನಂ.2 ರ‍್ಯಾಂಕಿಂಗ್ ಅಲಂಕರಿಸಿದ್ದರು.
ಇದನ್ನೂ ಓದಿ Kidambi Srikanth: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಭಾರತೀಯ ಶಟ್ಲರ್ ಕಿದಂಬಿ ಶ್ರೀಕಾಂತ್
ವೆಂಕಟ ದತ್ತ ಸಾಯಿ ಅವರು ಫೌಂಡೇಶನ್ ಆಫ್ ಲಿಬರಲ್ ಮತ್ತು ಮ್ಯಾನೇಜ್‌ಮೆಂಟ್ ಎಜುಕೇಶನ್‌ನಿಂದ ಲಿಬರಲ್ ಆರ್ಟ್ಸ್ ಅಂಡ್ ಸೈನ್ಸಸ್/ಲಿಬರಲ್ ಸ್ಟಡೀಸ್‌ನಲ್ಲಿ ಡಿಪ್ಲೊಮಾ ಮಾಡಿದ್ದಾರೆ. 2018 ರಲ್ಲಿ ಫ್ಲೇಮ್ ಯೂನಿವರ್ಸಿಟಿ ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್‌ನಿಂದ ತಮ್ಮ ಬಿಬಿಎ ಅಕೌಂಟಿಂಗ್ ಮತ್ತು ಫೈನಾನ್ಸ್ ಪೂರ್ಣಗೊಳಿಸಿದ್ದರು. ನಂತರ ಬೆಂಗಳೂರಿನ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಷನ್ ಟೆಕ್ನಾಲಜಿಯಿಂದ ಡೇಟಾ ಸೈನ್ಸ್ ಮತ್ತು ಮೆಷಿನ್ ಲರ್ನಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ್ದರು. ಜೆಎಸ್ ಡಬ್ಲ್ಯೂ ನೊಂದಿಗೆ ಬೇಸಿಗೆಯ ಇಂಟರ್ನ್ ಮತ್ತು ಆಂತರಿಕ ಸಲಹೆಗಾರರಾಗಿ ಕೆಲಸ ಮಾಡಿದ್ದರು.