Sunday, 15th December 2024

ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ಹುಟ್ಟಿಸಿದ ಪಿ.ವಿ.ಸಿಂಧು ಪೋಸ್ಟ್ !

ನವದೆಹಲಿ: ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಹಾಗೂ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಅವರು ಬ್ಯಾಡ್ಮಿಂಟನ್ ವಲಯದಲ್ಲಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಒಂದು ಪೋಸ್ಟ್ ಹಾಕಿ ಅಚ್ಚರಿ ಹುಟ್ಟಿಸಿದರು.

ಬ್ಯಾಡ್ಮಿಂಟನ್ ತಾರೆ ಟ್ವಿಟರ್ ಮತ್ತು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ‘ಡೆನ್ಮಾರ್ಕ್ ಓಪನ್ ಫೈನಲ್ ಆಗಿತ್ತು, ನಾನು ನಿವೃತ್ತಿ ಪಡೆದಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಕುತೂಹಲದ ಸಂಗತಿಯೆಂದರೆ ‘ನಾನು ನಿವೃತ್ತ’ ಎಂಬ ಪದಗಳನ್ನು ಕ್ಯಾಪಿಟಲ್ ಅಕ್ಷರಗಳಲ್ಲಿ ಬರೆದಾಗ ಅದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ನಾನು ನಿವೃತ್ತಿ ಹೊಂದುತ್ತಿರುವುದು ನಿಜ, ಆದ್ರೆ, ಬ್ಯಾಡ್ಮಿಂಟನ್ ಕ್ರೀಡೆ ಯಿಂದಲ್ಲ.. ಕೊರೋನಾದಂತಹ ಕೆಟ್ಟ ಪರಿಸ್ಥಿತಿಯಿಂದ ನಿವೃತ್ತಿಯಾಗುತ್ತಿದ್ದೆನೆ ಎಂದು ಹೇಳಿದ್ದಾರೆ.