ಕವಾಕಮಿ ಎದುರಿನ ಪಂದ್ಯದಲ್ಲಿ ಬಿರುಸಿನ ಸ್ಮ್ಯಾಷ್ಗಳ ಮೂಲಕ ರಂಜಿಸಿ ದರು. ಮೊದಲ ಗೇಮ್ನ ವಿರಾಮದ ವೇಳೆಗೆ ಮೂರು ಪಾಯಿಂಟ್ಗಳಿಂದ ಮುಂದಿದ್ದರು. ಬೇಸ್ಲೈನ್ನಲ್ಲಿಯೂ ಮಿಂಚಿದ ಭಾರತದ ಆಟಗಾರ್ತಿ 18-14ರಿಂದ ಮುನ್ನಡೆ ಸಾಧಿಸಿ ಅದೇ ಬಲದೊಂದಿಗೆ ಗೇಮ್ ತಮ್ಮದಾ ಗಿಸಿಕೊಂಡರು.
ಎರಡನೇ ಗೇಮ್ನಲ್ಲಿಯೂ ಕವಾಕಮಿ ಪರದಾಟ ಮುಂದುವರಿಯಿತು. ಸಿಂಧು ಆರಂಭದಲ್ಲೇ 5-0ಯಿಂದ ಮೇಲುಗೈ ಸಾಧಿಸಿ ದರು. ದೀರ್ಘರ್ಯಾಲಿಗಳಲ್ಲಿ ಮಿನುಗಿದ ಅವರು ವಿರಾಮದ ವೇಳೆ ಮುನ್ನಡೆಯನ್ನು 11-4ಕ್ಕೆ ಕೊಂಡೊಯ್ದರು.
ಮೂರನೇ ಶ್ರೇಯಾಂಕದ ಸಿಂಧು, ಫೈನಲ್ನಲ್ಲಿ ಚೀನಾದ ವಾಂಗ್ ಜಿ ಯಿ ಅವರನ್ನು ಎದುರಿಸುವರು. ವಾಂಗ್ ಅವರು ಏಷ್ಯನ್ ಚಾಂಪಿಯನ್ಷಿಪ್ ಚಿನ್ನದ ಪದಕ ವಿಜೇತೆ. ಈ ಟೂರ್ನಿಯ ಸೆಮಿಫೈನಲ್ನಲ್ಲಿ ಅವರು 21-14, 21-14ರಿಂದ ಒಹೊರಿ ಆಯಾ ಅವರನ್ನು ಮಣಿಸಿದರು.