ನವದೆಹಲಿ: ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ರಾಹುಲ್ ದ್ರಾವಿಡ್ (Rahul Dravidʼs Birthday) ಅವರು ಶನಿವಾರ ತಮ್ಮ 52ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಮಾಜಿ ಹಾಗೂ ಹಾಲಿ ಕ್ರಿಕೆಟಿಗರು, ಕ್ರಿಕೆಟ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಭಾರತದ ಮಾಜಿ ನಾಯಕನಿಗೆ ಶುಭಾಶಯ ಕೋರಿದಿದ್ದಾರೆ.
ಭಾರತ ತಂಡದ ಆಟಗಾರನಾಗಿ ಹಾಗೂ ನಾಯಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದೂವರೆ ದಶಕ ಆಡಿದ್ದ ರಾಹುಲ್ ದ್ರಾವಿಡ್, ಭಾರತ ಅಂಡರ್ 19 ತಂಡ ಹಾಗೂ ಭಾರತ ಹಿರಿಯರ ತಂಡದಲ್ಲಿಯೂ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ, ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರಿಕೆಟ್ ನಿರ್ದೇಶಕರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.
ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದಲ್ಲಿ ರಾಹುಲ್ ದ್ರಾವಿಡ್ ಸಾಕಷ್ಟು ದಾಖಲೆಗಳನ್ನು ಬರೆದಿದ್ದಾರೆ. ಇವುಗಳ ಪೈಕಿ ಅವರ ಕೆಲ ದಾಖಲೆಗಳನ್ನು ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ. ಅಂಥಾ ಅಗ್ರ 10 ದಾಖಲೆಗಳನ್ನು ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.
5️⃣0️⃣9️⃣ international games 👌
— BCCI (@BCCI) January 11, 2025
2️⃣4️⃣2️⃣0️⃣8️⃣ international runs 👍
4️⃣8️⃣ hundreds 💯 in international cricket
Here’s wishing Rahul Dravid – former Indian Cricket Team captain and the Head Coach of #TeamIndia's 2024 ICC Men's T20 World Cup-winning team – a very Happy Birthday 👏 🎂 pic.twitter.com/qv6zSDTKxj
ರಾಹುಲ್ ದ್ರಾವಿಡ್‌ರ ಟಾಪ್ 10 ಕ್ರಿಕೆಟ್ ದಾಖಲೆಗಳು
- ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಎಸೆತಗಳನ್ನು ಎದುರಿಸಿರುವುದು
ರಾಹುಲ್ ದ್ರಾವಿಡ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 31,258 ಎಸೆತಗಳನ್ನು ಆಡಿದ್ದಾರೆ. ಆ ಮೂಲಕ ಟೆಸ್ಟ್ ಇತಿಹಾಸದಲ್ಲಿ ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಬರೆದಿದ್ದಾರೆ.
2. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳು
ಟೆಸ್ಟ್ ಕ್ರಿಕೆಟ್‌ನಲ್ಲಿ ಫೀಲ್ಡರ್ ಆಗಿ ರಾಹುಲ್ ದ್ರಾವಿಡ್ ಅವರು 210 ಕ್ಯಾಚ್‌ಗಳನ್ನು ಪಡೆದಿದ್ದಾರೆ. ವಿಶೇಷವಾಗಿ ಸ್ಲಿಪ್‌ನಲ್ಲಿ ಅವರು ಗರಿಷ್ಠ ಕ್ಯಾಚ್‌ಗಳನ್ನು ಪಡೆದಿದ್ದಾರೆ.
3. ಕ್ರೀಸ್‌ನಲ್ಲಿ ದೀರ್ಘಾವಧಿ ಸಮಯ ಕಳೆದಿರುವುದು
ರಾಹುಲ್ ದ್ರಾವಿಡ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 44,152 ನಿಮಿಷಗಳ ಕ್ರೀಸ್‌ನಲ್ಲಿ ಸಮಯವನ್ನು ಕಳೆದಿದ್ದಾರೆ. ಇವರ ಬ್ಯಾಟಿಂಗ್ ಕೌಶಲದ ಎದುರು ಎದುರಾಳಿ ಬೌಲರ್‌ಗಳಿಗೆ ತಲೆ ನೋವಾಗಿ ಪರಿಣಮಿಸಿತ್ತು.
4. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳ ಜೊತೆಯಾಟ
ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ 88 ಶತಕಗಳ ಜೊತೆಯಾಟವನ್ನು ಆಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಈ ದಾಖಲೆ ಬರೆದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
5. ಅತಿ ಹೆಚ್ಚು ತ್ರಿಶಕಗಳ ಜೊತೆಯಾಟ
ರಾಹುಲ್ ದ್ರಾವಿಡ್ ಅವರು ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ ಆರು ಬಾರಿ ತ್ರಿಶತಕಗಳ ಜೊತೆಯಾಟವನ್ನು ಆಡಿದ್ದಾರೆ. ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಹಾಗೂ ವಿವಿಎಸ್ ಲಕ್ಷ್ಮಣ್ ಅವರ ಜೊತೆ ತ್ರಿಶತಕಗಳ ಜೊತೆಯಾಟವನ್ನು ಆಡಿದ್ದಾರೆ.
6. 120 ಪಂದ್ಯಗಳಲ್ಲಿ ಡಕ್‌ಔಟ್ ಆಗಿಲ್ಲ
ತಮ್ಮ 120 ಏಕದಿನ ಪಂದ್ಯಗಳಲ್ಲಿ ಒಮ್ಮೆಯೂ ಡಕ್‌ಔಟ್ ಆಗಿಲ್ಲ. ಆ ಮೂಲಕ ಭಾರತ ಏಕದಿನ ತಂಡದ ಮಧ್ಯಮ ಕ್ರಮಾಂಕದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ.
7. ಒಡಿಐ ಇತಿಹಾಸದಲ್ಲಿ ಗರಿಷ್ಠ ರನ್ ಜೊತೆಯಾಟ
1999ರಲ್ಲಿ ನ್ಯೂಜಿಲೆಂಡ್ ವಿರುದ್ಧ ಸಚಿನ್ ತೆಂಡೂಲ್ಕರ್ ಅವರ ಜೊತೆ ರಾಹುಲ್ ದ್ರಾವಿಡ್ 331 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಇದು ಅತ್ಯಂತ ಹೆಚ್ಚು ರನ್‌ಗಳ ಜೊತೆಯಾಟವಾಗಿದೆ.
8. ಟೆಸ್ಟ್ ಸರಣಿಯಲ್ಲಿ 2 ಬಾರಿ ಗರಿಷ್ಠ ಸ್ಕೋರ್
ರಾಹುಲ್ ದ್ರಾವಿಡ್ ಅವರು ಟೆಸ್ಟ್ ಸರಣಿಗಳಲ್ಲಿ ಎರಡು ಬಾಎಇ 600ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಿದ್ದಾರೆ, ಆ ಮೂಲಕ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಅವರೊಂದಿಗೆ ಜಂಟಿ ದಾಖಲೆಯನ್ನು ಹೊಂದಿದ್ದಾರೆ.
9. ಟೆಸ್ಟ್‌ನಲ್ಲಿ ದೀರ್ಘಾವಧಿ ಇನಿಂಗ್ಸ್
ರಾಹುಲ್ ದ್ರಾವಿಡ್ ಅವರು ಟೆಸ್ಟ್ ಪಂದ್ಯದಲ್ಲಿ ದೀರ್ಘಾವಧಿ ಇನಿಂಗ್ಸ್ ಆಡಿದ್ದಾರೆ. ಅವರು 2004ರಲ್ಲಿ ಪಾಕಿಸ್ತಾನ ವಿರುದ್ಧ 740 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದರು. ಭಾರತೀಯ ಆಟಗಾರರ ಪಾಲಿಗೆ ದೀರ್ಘಾವಧಿ ಇನಿಂಗ್ಸ್ ಇದಾಗಿದೆ.
10. ಟೆಸ್ಟ್ ಆಡುವ ರಾಷ್ಟ್ರಗಳಲ್ಲಿ ಶತಕ
ಟೆಸ್ಟ್ ಕ್ರಿಕೆಟ್ ಆಡುವ ರಾಷ್ಟ್ರಗಳಲ್ಲಿ ಶತಕ ಸಿಡಿಸಿದ ವಿಶ್ವದ ಬ್ಯಾಟ್ಸ್‌ಮನ್‌ಗಳಲ್ಲಿ ರಾಹುಲ್ ದ್ರಾವಿಡ್ ಕೂಡ ಒಬ್ಬರಾಗಿದ್ದಾರೆ.
IPL 2025: 8 ವರ್ಷಗಳ ಹಿಂದಿನ ಐಪಿಎಲ್ ಅನುಭವ ಹಂಚಿಕೊಂಡ ರಾಹುಲ್ ದ್ರಾವಿಡ್