ಅಬುಧಾಬಿ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಹೊಸ ಆರಂಭಿಕ ಜೋಡಿ ಯನ್ನು ಕಣಕ್ಕಿಳಿಸಿತು. ಅದುವೇ ಶುಬ್ಮನ್ ಗಿಲ್ ಮತ್ತು ರಾಹುಲ್ ತ್ರಿಪಾಠಿ ಆರಂಭಿಕರಾಗಿ ಕಣಕ್ಕಿಳಿದರು. ಈ ಪೈಕಿ, ತನಗೆ ನೀಡಿದ ಜವಾಬ್ಧಾರಿಯನ್ನು ಅದ್ಭುತ ವಾಗಿ ನಿರ್ವಹಿಸಿದ ತ್ರಿಪಾಠಿ ತಂಡಕ್ಕೆ ಅತ್ಯುತ್ತಮ ಕೊಡುಗೆಯನ್ನು ನೀಡಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಂತರ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ಪುಣೆಯ ಪ್ರತಿಭಾನ್ವಿತ ಆಟಗಾರ ರಾಹುಲ್ ತ್ರಿಪಾಠಿಯನ್ನು ಬ್ಯಾಟಿಂಗ್‌ಗೆ ಆರಂಭದಲ್ಲೇ ಕಣ ಕ್ಕಿಳಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅನುಭವಿ ಬೌಲರ್‌ಗಳ ದಾಳಿಯನ್ನು ಅದ್ಭುತ ವಾಗಿ ಎದುರಿಸಿದ ತ್ರಿಪಾಠಿ 51 ಎಸೆತಗಳಲ್ಲಿ 81 ರನ್ ಗಳಿಸಿ ಮಿಂಚಿದ್ದಾರೆ.
ರಾಹುಲ್ ತ್ರಿಪಾಠಿ ಕೆಕೆಆರ್ ತಂಡದ ಈ ಹಿಂದಿನ ಪಂದ್ಯದಲ್ಲಿ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದು ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ದ್ದರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 16 ಎಸೆತಗಳನ್ನು ಎದುರಿಸಿ ದ ರಾಹುಲ್ ತ್ರಿಪಾಠಿ 36 ರನ್ ಬಾರಿಸಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದ್ದರು.
29ರ ಹರೆಯದ ರಾಹುಲ್ ತ್ರಿಪಾಠಿ ಪವರ್‌ಪ್ಲೇನಲ್ಲಿ ಸ್ಥಿರವಾದ ಪ್ರದರ್ಶನ ನೀಡುವಲ್ಲಿ ಯಶಸ್ವಿ ಯಾದರು. ಅರಂಭಿಕ ಜೊತೆಗಾರ ಶುಬ್ಮನ್ ಗಿಲ್ ಬೇಗನೆ ವಿಕೆಟ್ ಕಳೆದುಕೊಂಡರೂ ಚೆನ್ನೈ ಬೌಲರ್‌ಗಳಾದ ದೀಪಕ್ ಚಾಹರ್, ಸ್ಯಾಮ್ ಕರ್ರನ್, ಶಾರ್ದೂಲ್ ಠಾಕೂರ್ ಹಾಗೂ ಡ್ವೇಯ್ನ್ ಬ್ರಾವೋ ಅವರನ್ನು ಗುರಿಯಾಗಿಸಿ ದೊಡ್ಡ ಹೊಡೆತವನ್ನು ಬಾರಿಸು ವಲ್ಲಿ ತ್ರಿಪಾಠಿ ಯಶಸ್ವಿಯಾಗಿ ದ್ದಾರೆ.
ಇಪ್ಪತ್ತು ಪಂದ್ಯಗಳಲ್ಲಿ ರಾಹುಲ್ ಆರಂಭಿಕನಾಗಿ ಕಣಕ್ಕಿಳಿದುದ್ದು 34.61ರ ಸರಾಸರಿಯಲ್ಲಿ 650+ ರನ್ ಗಳಿಸಿದ್ದಾರೆ. 142.56ರ ಆರೋಗ್ಯಕರ ಸರಾಸರಿ ಯಲ್ಲಿ ಬ್ಯಾಟ್ ಬೀಸಿ ಗಮನ ಸೆಳೆದಿದ್ದಾರೆ.