Saturday, 10th June 2023

ಟಿ 20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಮಳೆ ಭೀತಿ..!

ಮೆಲ್ಬರ್ನ್‌: ಎಂಸಿಜಿಯಲ್ಲಿ ನಡೆಯುವ ಟಿ 20 ವಿಶ್ವಕಪ್ ನ ಇಂಗ್ಲೆಂಡ್ ಮತ್ತು ಪಾಕಿಸ್ಥಾನ ನಡುವಿನ ಫೈನಲ್ ಪಂದ್ಯ ಮಳೆಯಿಂದಾಗಿ ರದ್ದಾಗಲಿದೆ ಎಂದು ವರದಿಯಾಗಿದೆ.

ಭಾನುವಾರ ಮೆಲ್ಬರ್ನ್‌ ನಲ್ಲಿ 95 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ. 25 ಮಿ.ಮೀ. ವರೆಗೆ ಬೀಳುವ ಮುನ್ಸೂಚನೆ ಇದೆ.

ಆಟವು ಭಾನುವಾರ ಪ್ರಾರಂಭವಾದರೂ ಪೂರ್ಣಗೊಳಿಸಲಾಗದಿದ್ದರೆ ಅದನ್ನು ಮೀಸಲು ದಿನದಂದು ಪುನರಾರಂಭಿಸಲಾಗು ತ್ತದೆ. ಒಮ್ಮೆ ಟಾಸ್ ನಡೆದ ನಂತರ, ಆಟವನ್ನು ಲೈವ್ ಎಂದು ಪರಿಗಣಿಸಲಾಗುತ್ತ.ಯಾವುದೇ ಆಟ ಸಾಧ್ಯವಾಗದಿದ್ದರೆ, ಆಟವು ಸೋಮವಾರದಂದು ಮೀಸಲು ದಿನಕ್ಕೆ ಮುಂದುವರಿಯುತ್ತದೆ.

ಎರಡೂ ದಿನಗಳಲ್ಲಿ ಮಳೆ ಅಡ್ಡಿಪಡಿಸಿದರೆ ಇಂಗ್ಲೆಂಡ್ ಮತ್ತು ಪಾಕಿಸ್ಥಾನ ತಂಡಗಳು ಜಂಟಿಯಾಗಿ ಟ್ರೋಫಿ ಹಂಚಿಕೊಳ್ಳುವ ಅನಿವಾರ್ಯತೆ ಎದುರಾಗಲಿದೆ.

ಈ ಹಿಂದೆ, 2019 ರ ಏಕದಿನ ವಿಶ್ವಕಪ್ ಸೆಮಿಫೈನಲ್ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಪಂದ್ಯ ಮಳೆಯಿಂದಾಗಿ ಎರಡು ದಿನಗಳ ಕಾಲ ನಡೆದಿತ್ತು. ಭಾರತ ಮತ್ತು ಶ್ರೀಲಂಕಾ ನಡುವಿನ 2002 ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಕೂಡ ತೊಳೆದು ಹೋಗಿತ್ತು.

error: Content is protected !!