Saturday, 14th December 2024

ಬ್ರೇಕಿಂಗ್ ನ್ಯೂಸ್: ಮಳೆಯಿಂದಾಗಿ ಇಂದಿನ ಆಟ ರದ್ದು

ಬ್ರಿಸ್ಬೇನ್‌: ಬೋರ್ಡರ್‌- ಗವಾಸ್ಕರ್‌ ಟ್ರೋಫಿಯ ಅಂತಿಮ ಟೆಸ್ಟ್‌ ಪಂದ್ಯದ ಎರಡನೇ ದಿನ ಟೀಂ ಇಂಡಿಯಾದ ಪ್ರಥಮ ಇನ್ನಿಂಗ್ಸ್‌ ಆಟಕ್ಕೆ ವರುಣ ಅಡ್ಡಿಯಾಗಿದ್ದಾನೆ.

ಆತಿಥೇಯ ಆಸೀಸ್‌ ತಂಡ 369 ರನ್ನಿಗೆ ತನ್ನಾಟ ಮುಗಿಸಿತು. ಪ್ರತಿಯಾಗಿ ಭಾರತ ಎರಡು ವಿಕೆಟ್‌ ಕಳೆದುಕೊಂಡು 26 ಓವರುಗಳಲ್ಲಿ 62 ಗಳಿಸಿತ್ತು. ಟೀ ವಿರಾಮದ ಬಳಿಕ ಆಟ ಶುರುವಿಟ್ಟಾಗ, ಮಳೆ ಆರಂಭವಾದ ಕಾರಣ, ಆಟ ಪುನರಾರಂಭಕ್ಕೆ ಅಡ್ಡಿಯಾಗಿದೆ.

ಅಂಪೈರ್‌ಗಳ ಸತತ ಪರಿವೀಕ್ಷಣೆಯ ನಂತರ, ಅಂತಿಮವಾಗಿ ಎರಡನೇ ದಿನದಾಟ ಅಂತ್ಯಗೊಳಿಸಲು ನಿರ್ಧರಿಸಲಾಗಿದೆ.

ಇನ್ನು ಮೂರು ದಿನಗಳ ಆಟ ಬಾಕಿ ಇದೆ. ಈಗಾಗಲೇ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದು ಪಂದ್ಯ ಗೆದ್ದಿದ್ದು, ಮೂರನೇ ಟೆಸ್ಟ್ ಪಂದ್ಯ ಡ್ರಾಗೊಂಡಿತ್ತು.