Thursday, 12th December 2024

ಡ್ರ್ಯಾಗನ್ ಫ್ಲೈ ಕ್ಲಬ್ ಮೇಲೆ ದಾಳಿ: ಕ್ರಿಕೆಟಿಗ ರೈನಾ, ಗಾಯಕ ರಾಂಢವಾ ಬಂಧನ, ಬಿಡುಗಡೆ

ನವದೆಹಲಿ : ಮುಂಬೈ ವಿಮಾನ ನಿಲ್ದಾಣದ ಬಳಿಯ ಮುಂಬೈ ಡ್ರ್ಯಾಗನ್ ಫ್ಲೈ ಕ್ಲಬ್ ಮೇಲೆ ದಾಳಿ ನಡೆಸಿ ಭಾರತೀಯ ಕ್ರಿಕೆಟ್ ತಂಡದ ಹಿರಿಯ ಕ್ರಿಕೆಟಿಗ ಸುರೇಶ್ ರೈನಾ ಮತ್ತು ಗಾಯಕ ಗುರು ರಾಂಡವಾ ರನ್ನು ಮುಂಬೈನಲ್ಲಿ ಬಂಧಿಸಲಾಗಿದೆ. ನಂತರ ಇಬ್ಬರೂ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ

ದಾಳಿಯಲ್ಲಿ ಮುಂಬೈ ಕ್ಲಬ್ ನ ಏಳು ಸಿಬ್ಬಂದಿ ಸೇರಿದಂತೆ ಒಟ್ಟು 34 ಮಂದಿಯನ್ನು ಬಂಧಿಸಲಾಗಿದೆ. ಕೋವಿಡ್ ನಿಯಮ ಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಗಾಯಕ ಗುರು ರಾಂಡವಾ ಮತ್ತು ಕ್ರಿಕೆಟಿಗ ಸುರೇಶ್ ರೈನಾ ರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಸಹರ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಅನುಮತಿಸಿರುವ ಕಾಲಮಿತಿಯಾಚೆಗೆ ಸಂಸ್ಥೆ ತೆರೆದಿಡಲು ಮತ್ತು ಕೋವಿಡ್ ನಿಯಮಗಳನ್ನು ಪಾಲಿಸದೆ ಇರುವುದಕ್ಕಾಗಿ ಡ್ರ್ಯಾಗನ್ ಫ್ಲೈ ಪಬ್ ಮೇಲೆ ದಾಳಿ ನಡೆಸಿದ ನಂತರ ಈ ಬಂಧನಗಳನ್ನು ಮಾಡಲಾಗಿದೆ.