ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಕಲೆ ಹಾಕಿತು. ವಿರಾಟ್ ಕೊಹ್ಲಿ ಕೇವಲ 7 ರನ್ ಗಳಿಗೆ ಸಂಜು ಸ್ಯಾಮ್ಸನ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರೆ, ನಾಯಕ ಫಾಪ್ ಡು ಪ್ಲೆಸಿಸ್ 25 ರನ್ ಗಳಿಸಿ, ಆರ್ ಅಶ್ವಿನ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ಹಾದಿ ಹಿಡಿದರು.
ರಜತ್ ಪಾಟಿದಾರ್ ಈ ಪಂದ್ಯದಲ್ಲಿ 58 ರನ್ ಗಳಿಸಲಷ್ಟೇ ಶಕ್ತರಾದರು. ಗ್ಲೆನ್ ಮ್ಯಾಕ್ಸ್ ವೆಲ್ 24, ಮಹಿಪಾಲ್ ಲೊಮ್ರೊರ್ 8, ದಿನೇಶ್ ಕಾರ್ತಿಕ್ 6, ರನ್ ನೀಡಿ ರಿಯಾನ್ ಪರಾಗ್ ಗೆ ಕ್ಯಾಚ್ ನೀಡಿದರು. ಹರ್ಷಲ್ ಪಟೇಲ್, ಜೋಶ್ ಹೇಜಲ್ ವುಡ್ ಕೇವಲ 1 ರನ್ ಗಳಿಸಿ ಔಟಾದರು.
158 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್ ತಂಡ 18.1 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 161 ರನ್ ಗಳಿಸುವ ಮೂಲಕ ಫೈನಲ್ ಗೆ ಸುಲಭವಾಗಿ ಲಗ್ಗೆ ಇಟ್ಟಿತು. ರಾಜಸ್ಥಾನ ರಾಯಲ್ಸ್ ಪರ ಯಶಸ್ವಿ ಜೈಸ್ವಾಲ್ 21 ರನ್ ಗಳಿಸಿದರೆ ಜೋಸ್ ಬಟ್ಲರ್ 60 ಎಸೆತಗಳಲ್ಲಿ 6 ಸಿಕ್ಸರ್ 10 ಬೌಂಡರಿ ಗಳೊಂದಿಗೆ 106 ರನ್ ಗಳಿಸಿ ತಂಡ ಗೆಲುವಲ್ಲಿ ಪ್ರಮುಖ ಕೊಡುಗೆ ನೀಡಿದರು.
ಸಂಜು ಸ್ಯಾಮ್ಸನ್ 23,ದೇವದತ್ ಪಡಿಕ್ಕಲ್ 9, ಶಿಮ್ರಾನ್ ಹೆಟ್ಮಿಯರ್ 2 ರನ್ ಗಳಿಸಿದರು. ಆರ್ ಸಿಬಿ ಪರ ಜೋಶ್ ಹೇಜಲ್ ವುಡ್ 2 ವಿಕೆಟ್ ಪಡೆದರೆ ವನಿಂದು ಹಸರಂಗ 1 ವಿಕೆಟ್ ಪಡೆದರು. ಮೂರು ವಿಕೆಟ್ ಗಳೊಂದಿಗೆ ರಾಜಸ್ಥಾನ ರಾಯಲ್ಸ್ ಭರ್ಜರಿ ಗೆಲುವು ದಾಖಲಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ಕಳೆದ ಪಂದ್ಯದ ಶತಕವೀರ ರಜತ್ ಪಾಟಿದಾರ್ (58 ರನ್, 42 ಎಸೆತ, 4 ಬೌಂಡರಿ, 3 ಸಿಕ್ಸರ್) ಅರ್ಧಶತಕದಾಟದ ನಡುವೆಯೂ ಸ್ಲಾಗ್ ಓವರ್‌ಗಳಲ್ಲಿ ದಿಢೀರ್ ಕುಸಿತ ಕಂಡ ಪರಿಣಾಮ 8 ವಿಕೆಟ್‌ಗೆ 157 ರನ್ ಪೇರಿಸಲಷ್ಟೇ ಶಕ್ತವಾಯಿತು.
ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ (21ರನ್, 13 ಎಸೆತ, 1 ಬೌಂಡರಿ, 2 ಸಿಕ್ಸರ್) ಹಾಗೂ ಜೋಸ್ ಬಟ್ಲರ್ ಜೋಡಿ ಬಿರುಸಿನ ಆರಂಭ ನೀಡಿತು. ಮೊಹಮದ್ ಸಿರಾಜ್ ಎಸೆದ ಮೊದಲ ಓವರ್‌ನಲ್ಲೇ ಯಶಸ್ವಿ ಜೈಸ್ವಾಲ್ 2 ಸಿಕ್ಸರ್, 1 ಬೌಂಡರಿ ಒಳಗೊಂಡಂತೆ 16 ರನ್ ಕಸಿದರು. ಬಟ್ಲರ್- ಯಶಸ್ವಿ ಜೈಸ್ವಾಲ್ ಜೋಡಿ ಮೊದಲ ವಿಕೆಟ್‌ಗೆ 31 ಎಸೆತಗಳಲ್ಲಿ 61 ರನ್ ಪೇರಿಸಿ ತಂಡದ ಗೆಲುವನ್ನು ಸುಲಭವಾಗಿಸಿತು.
ಆರ್‌ಸಿಬಿ: 8 ವಿಕೆಟ್‌ಗೆ 157 (ರಜತ್ ಪಾಟಿದಾರ್ 58, ಪ್ಲೆಸಿಸ್ 25, ಗ್ಲೆನ್ ಮ್ಯಾಕ್ಸ್‌ವೆಲ್ 24, ಪ್ರಸಿದ್ಧ ಕೃಷ್ಣ 22ಕ್ಕೆ 3, ಒಬೆಡ್ ಮೆಕ್‌ಕಾಯ್ 23ಕ್ಕೆ 3), ರಾಜಸ್ಥಾನ ರಾಯಲ್ಸ್: 18.1 ಓವರ್‌ಗಳಲ್ಲಿ 3 ವಿಕೆಟ್‌ಗೆ 161 (ಜೋಸ್ ಬಟ್ಲರ್ 106*, ಯಶಸ್ವಿ ಜೈಸ್ವಾಲ್ 21, ಸಂಜು ಸ್ಯಾಮ್ಸನ್ 23, ಜೋಸ್ ಹ್ಯಾಸಲ್‌ವುಡ್ 23ಕ್ಕೆ 2, ವನಿಂದು ಹಸರಂಗ 26ಕ್ಕೆ 1).