Sunday, 15th December 2024

ಆರ್‌ಆರ್‌ ಅಜೇಯ ಆಟಕ್ಕೆ ಆರ್‌ಸಿಬಿ ಬ್ರೇಕ್‌

#dinesh karthikಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ನ 13ನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ಆರ್​ಆರ್ ತಂಡಕ್ಕೆ ಫಾಫ್​ ಡು ಪ್ಲೆಸಿಸ್​ ನಾಯ ಕತ್ವದ ಆರ್​ಸಿಬಿ ತಂಡ ಸವಾಲು ಹಾಕಿತ್ತು.
ದಿಕ್ಕು ತೋಚದೇ ಸೋಲಿನ ಹಾದಿಯಲ್ಲಿದ್ದ ಆರ್​ಸಿಬಿ ತಂಡಕ್ಕೆ ದಿನೇಶ್​ ಕಾರ್ತಿಕ್ ಹಾಗೂ ಶಹಬ್ಬಾಸ್ ಅಹಮದ್ ಅದ್ಭುತ ಆಟ ಪ್ರದರ್ಶಿಸಿ ಆರ್​ಸಿಬಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆರ್​ಸಿಬಿಗೆ ಈ ಇಬ್ಬರು ಆಟಗಾರರು ನೆರವಾಗಿ ಕೊನೆಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರಿಗೆ ವಿಜಯ ಲಕ್ಷ್ಮಿಯನ್ನು ಒಲಿಸಿಕೊಟ್ಟಿದ್ದಾರೆ. 170 ರನ್​ಗಳ ಗುರಿ ಬೆನ್ನತ್ತಿದ್ದ ಆರ್​​ಸಿಬಿ ಯಶಸ್ವಿ ಯಾಗಿದೆ.
87 ರನ್ ಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಯಲ್ಲಿದ್ದ ವೇಳೆ, ದಿನೇಶ್ ಕಾರ್ತಿಕ್ ಹಾಗೂ ಶಾಬಾಜ್ ಅಹ್ಮದ್ ಕೇವಲ 33 ಎಸೆತಗಳಲ್ಲಿ 67 ರನ್ ಸಿಡಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗ ಳೂರು ತಂಡ 4 ವಿಕೆಟ್ ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಲು ನೆರವಾದರು.

ಶಹಬಾಜ್​ ಅಹಮದ್​ 26 ಬಾಲ್​ಗಳಲ್ಲಿ 46 ರನ್​ಗಳಿಸಿ ಔಟ್​ ಆದರು. ದಿನೇಶ್​ ಕಾರ್ತಿಕ್​ 23 ಬಾಲ್​ಗಳಲ್ಲಿ 44 ರನ್​​ಗಳಿಸಿ ಆರ್​ಸಿಬಿಗೆ ಗೆಲುವು ತಂದುಕೊಟ್ಟಿದ್ದಾರೆ.

170 ರನ್​ಗಳ ಚೇಸಿಂಗ್ ಆರಂಭಿಸಿದ ಆರ್​ಸಿಬಿ ತಂಡಕ್ಕೆ ಮೊದಲ ವಿಕೆಟ್​​ಗೆ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ಅನುಜ್ ರಾವತ್ ಅರ್ಧ ಶತಕದ ಜೊತೆಯಾಟವಾಡಿದ್ದರು. ಡು ಪ್ಲೆಸಿಸ್​​ 25 ಬಾಲ್​ಗಳಲ್ಲಿ 26 ರನ್​ಗಳಿಸಿ ಔಟ್​ ಆದರು. ಇನ್ನೂ 20 ಎಸೆತಗಳಲ್ಲಿ 26ರನ್​ಗಳಿಸಿದ್ದ ಅನುಜ್​ ಕೂಡ ಕ್ಯಾಚ್​ ನೀಡಿ ಔಟ್​ ಆದರು. ಚಾಹಲ್ ಎಸೆತದಲ್ಲಿ ಫಾಫ್ ಡು ಪ್ಲೆಸಿಸ್, ಬೌಲ್ಟ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದಾಗ ಆರ್ ಸಿಬಿ ಮೊದಲ ಆಘಾತ ಕಂಡಿತು.

ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ವೈಫಲ್ಯ ಎದುರಿಸಿದರು. ವಿರಾಟ್ ಕೊಹ್ಲಿ, ಯಜುವೇಂದ್ರ ಚಾಹಲ್ ಮಾಡಿದ ಆಕರ್ಷಕ ರನೌಟ್​ಗೆ ಬಲಿಯಾದರು. ಡೇವಿಡ್ ವಿಲ್ಲಿ ಕೇವಲ 2 ಎಸೆತಗಳಿಗೆ ತಮ್ಮ ಆಟ ಮುಗಿಸಿದಾಗ ಆರ್ ಸಿಬಿ 62 ರನ್ ಗೆ 4 ವಿಕೆಟ್ ಕಳೆದು ಕೊಂಡು ಆಘಾತ ಕಂಡಿತು.

ಶಹಬಾಜ್​ ಅಹಮದ್​ ಹಾಗೂ ದಿನೇಶ್ ಕಾರ್ತಿಕ್​ ಸೂಪರ್​ ಜೊತೆಯಾಟ ನೀಡಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನೂ ಶಹಬಾಜ್​ ಔಟ್​ ಆದ ಬಳಿಕ ಹರ್ಷಲ್​ ಪಟೇಲ್​ ಸಿಕ್ಸ್ ಭಾರಿಸುವ ಮೂಲಕ ಆರ್​ಸಿಬಿಗೆ ಗೆಲುವಯ ತಂದು ಕೊಟ್ಟರು.