Thursday, 12th December 2024

ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಆರ್‌ಸಿಬಿ

ಚೆನ್ನೈ: ಐಪಿಎಲ್ ನ 10ನೇ ಪಂದ್ಯ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ಮುಖಾಮುಖಿಯಾಗಿವೆ. ಆರ್ ಸಿ ಬಿ ತಂಡದ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದು ಬ್ಯಾಂಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಇತ್ತೀಚಿನ ವರದಿ ಪ್ರಕಾರ, ಆರ್‌ಸಿಬಿ ತಂಡ ನಾಯಕ ವಿರಾಟ್‌ ಕೊಹ್ಲಿ ಸಹಿತ ಆರಂಭಿಕರನ್ನು ಕಳೆದುಕೊಂಡಿದೆ. ಆದರೆ, ಮ್ಯಾಕ್ಸ್ ವೆಲ್‌ ಅವರ ಸ್ಫೋಟಕ ಆಟದ ನೆರವಿನಿಂದ ಪಂದ್ಯದಲ್ಲಿ ತನ್ನ ಸ್ಥಿತಿಯನ್ನು ಉತ್ತಮಪಡಿಸಿಕೊಂಡಿದೆ.

ಎರಡು ತಂಡಗಳು ಇದುವರೆಗೂ 26ಬಾರಿ ಮುಖಾಮುಖಿಯಾಗಿದ್ದು, ಕೆಕೆಆರ್ 14 ಬಾರಿ ಜಯ ಕಂಡರೆ ಆರ್ ಸಿ ಬಿ ತಂಡ 12 ಬಾರಿ ಜಯ ಗಳಿಸಿದೆ.