RCB vs SRH: ಐಪಿಎಲ್‌ನಲ್ಲಿ 42 ಬಾರಿ 200+ರನ್ ದಾಖಲೆ
ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಸ್ಫೋಟಕ ಆಟವಾಡಿ 6 ವಿಕೆಟ್‌ಗೆ 231 ರನ್ ಕಲೆಹಾಕಿತು. ಬೃಹತ್ ಮೊತ್ತ ಬೆನ್ನತ್ತಿದ್ದ ಆರ್‌ಸಿಬಿಗೆ ಉತ್ತಮ ಆರಂಭದ ಹೊರತಾಗಿಯೂ ಮಧ್ಯಮ ಕ್ರಮಾಂಕದ ವೈಫಲ್ಯದಿಂದಾಗಿ 19.5 ಓವರ್‌ಗಳಲ್ಲಿ 189ಕ್ಕೆ ಆಲೌಟಾಯಿತು.

ಲಕ್ನೋ: ಶುಕ್ರವಾರ ರಾತ್ರಿ ನಡೆದಿದ್ದ ಆರ್‌ಸಿಬಿ(RCB vs SRH) ಮತ್ತು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ದಾಖಲೆಯೊಂದು ನಿರ್ಮಾಣವಾಗಿದೆ. ಹೈದರಾಬಾದ್ ತಂಡ 200 ಪ್ಲಸ್ ಮೊತ್ತ ಪೇರಿಸುವ ಮೂಲಕ ಈ ಬಾರಿ ಐಪಿಎಲ್(IPL 2025)ನಲ್ಲಿ ಒಟ್ಟು 42 ಬಾರಿ ತಂಡಗಳು 200ಕ್ಕೂ ಹೆಚ್ಚು ರನ್ ಕಲೆಹಾಕಿದ ದಾಖಲೆ ನಿರ್ಮಾಣವಾಯಿತು. ಇದು ಟೂರ್ನಿ ಇತಿಹಾಸದಲ್ಲೇ ಹೊಸ ದಾಖಲೆ. 2024 ರಲ್ಲಿ ಒಟ್ಟು 41 ಬಾರಿ ತಂಡಗಳು 200ಕ್ಕೂ ರನ್ ಕಲೆಹಾಕಿದ್ದವು.
ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಸ್ಫೋಟಕ ಆಟವಾಡಿ 6 ವಿಕೆಟ್‌ಗೆ 231 ರನ್ ಕಲೆಹಾಕಿತು. ಬೃಹತ್ ಮೊತ್ತ ಬೆನ್ನತ್ತಿದ್ದ ಆರ್‌ಸಿಬಿಗೆ ಉತ್ತಮ ಆರಂಭದ ಹೊರತಾಗಿಯೂ ಮಧ್ಯಮ ಕ್ರಮಾಂಕದ ವೈಫಲ್ಯದಿಂದಾಗಿ 19.5 ಓವರ್‌ಗಳಲ್ಲಿ 189ಕ್ಕೆ ಆಲೌಟಾಯಿತು.
ಸೋಲುಂಡ ಆರ್‌ಸಿಬಿ ಅಂಕಪಟ್ಟಿ ಯಲ್ಲಿ 2ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಜಾರಿದೆ. ಕುಸಿಯಿತು. ಈ ಪಂದ್ಯ ಗೆದ್ದಿದ್ದರೆ ಅಗ್ರಸ್ಥಾನಕ್ಕೇರುವುದರ ಜೊತೆಗೆ, ಲೀಗ್ ಹಂತದ ಕೊನೆಗೆ ಅಗ್ರ-2ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಅವಕಾಶವಿತ್ತು.
ಇದನ್ನೂ ಓದಿ IPL 2025: ಆರ್‌ಸಿಬಿ ಎದುರು ಅಜೇಯ 94 ರನ್ ಸಿಡಿಸಿ ಫಾರ್ಮ್‌ಗೆ ಮರಳಿದ ಇಶಾನ್ ಕಿಶನ್!
ಚೇಸಿಂಗ್ ವೇಳೆ ಕೊಹ್ಲಿ25 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್‌ನೊಂದಿಗೆ 43 ರನ್ ಸಿಡಿಸಿ ಔಟಾದರೆ, ಫಿಲ್ ಸಾಲ್ಟ್ 32 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ 62 ರನ್ ಬಾರಿಸಿ 12ನೇ ಓವರ್‌ನಲ್ಲಿ ಔಟಾದರು. ಈ ಜೋಡಿ ಪವರ್-ಪ್ಲೇನಲ್ಲೇ ತಂಡ 72 ರನ್ ಗಳಿಸಿತು. ಆದರೆ ಉಭಯ ಆಟಗಾರರ ವಿಕೆಟ್ ಪತನದ ಬಳಿಕ ಯಾರು ಕೂಡ ತಂಡಕ್ಕೆ ಆಸರೆಯಾಗಲಿಲ್ಲ. ತಂಡ ಕೊನೆ 16 ರನ್‌ಗೆ 7 ವಿಕೆಟ್ ಕಳೆದುಕೊಂಡಿತು. ಹೀಗಾಗಿ ತಂಡ ಸೋಲು ಕಂಡಿತು.