Thursday, 12th December 2024

ಟಾಸ್ ಗೆದ್ದ ಕೊಹ್ಲಿ ಪಡೆ ಬ್ಯಾಟಿಂಗ್

ದುಬೈ: ಐಪಿಎಲ್ ಚೆನ್ನೈ – ಆರ್ ಸಿಬಿಯ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಕೊಹ್ಲಿ ಪಡೆ ಬ್ಯಾಟಿಂಗ್ ಆಯ್ದುಕೊಂಡಿದೆ.

7 ಪಂದ್ಯ ಗೆದ್ದಿರುವ ಆರ್‌ ಸಿಬಿ ಈಗ ತುಂಬು ಆತ್ಮವಿಶ್ವಾಸದಲ್ಲಿದೆ. ಕಳೆದ ಪಂದ್ಯದಲ್ಲಿ ಕೆಕೆಆರ್‌ ತಂಡವನ್ನು ಮಗುಚಿದ ರೀತಿ ಆರ್‌ಸಿಬಿ ಎಷ್ಟು ಪ್ರಬಲವಾಗಿ ಸಂಘಟಿತಗೊಂಡಿದೆ ಎಂಬುದು ತಿಳಿಯುತ್ತದೆ. ಕೋಲ್ಕತಾ ಎದುರು ಸಿರಾಜ್‌ ಘಾತಕ ಬೌಲಿಂಗ್‌, ರಾಜಸ್ಥಾನ್‌ ವಿರುದ್ಧ “ಮಿಸ್ಟರ್‌ 360 ಡಿಗ್ರಿ’ ಖ್ಯಾತಿಯ ಎಬಿಡಿ ಪ್ರಚಂಡ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರು. ಪಡಿಕ್ಕಲ್‌ ಆರಂಭಿಕ ಸಾಹಸವನ್ನು ಪುನರಾವರ್ತಿಸಬೇಕಿದೆ. ಇವರಿಬ್ಬರು ಸಿಡಿದು ನಿಂತರೆ ಆರ್‌ ಸಿಬಿ ಹೆಚ್ಚು ಆಕ್ರಮಣಕಾರಿಯಾಗಿ ಗೋಚರಿಸುವುದು ಖಚಿತ.

ಆರ್‌ಸಿಬಿ ಈ ವರ್ಷ ಬೌಲಿಂಗ್‌ ವಿಭಾಗ ಹೆಚ್ಚು ವೈವಿಧ್ಯಮಯವಾಗಿದ್ದು, ಘಾತಕವಾಗಿ ಗೋಚರಿಸಿದೆ. ಚಹಲ್‌, ವಾಷಿಂಗ್ಟನ್‌ ಸುಂದರ್‌ ಸ್ಪಿನ್‌ ವಿಭಾಗದಲ್ಲಿ ಮಿಂಚುತಿದ್ದಾರೆ. ಮಾರಿಸ್‌, ಸಿರಾಜ್‌, ಸೈನಿ ವೇಗದ ಬೌಲಿಂಗ್ ‌ವಿಭಾಗವನ್ನು ಸಮರ್ಥ ರೀಯಲ್ಲಿ ನಿಭಾಯಿಸುತ್ತಿದ್ದಾರೆ. ಈ ಪಂದ್ಯಕ್ಕೆ ಆರ್‌ಸಿಬಿ ತಂಡದಲ್ಲಿ ಮೊಯಿನ್ ಅಲಿ ಸ್ಥಾನ ಪಡೆದುಕೊಂಡಿದ್ದಾರೆ.

ಧೋನಿ ಪಡೆ ಮೊದಲ ಸಲ ಮುಂದಿನ ಸುತ್ತನ್ನು ಕಾಣದೆ ಹೊರಬೀಳುವ ಸಂಕಟದಲ್ಲಿದೆ. ಜತೆಗೆ ಕೂಟದಿಂದ ಹೊರಬಿದ್ದ ಮೊದಲ ತಂಡವೆಂಬ ಕಳಂಕವೂ ತಟ್ಟಲಿದೆ.