Friday, 22nd November 2024

ಹಾಂಕಾಂಗ್‌ ಕ್ರಿಕೆಟ್‌ ಸಿಕ್ಸಸ್ ಟೂರ್ನಮೆಂಟ್:‌ ಭಾರತೀಯ ತಂಡಕ್ಕೆ ರಾಬಿನ್‌ ನಾಯಕತ್ವ

ಚೆನ್ನೈ: ಸುಮಾರು ಆರು ವರ್ಷಗಳ ಬಳಿಕ ಹಾಂಕಾಂಗ್‌ ಕ್ರಿಕೆಟ್‌ ಸಿಕ್ಸರ್‌ ಟೂರ್ನಮೆಂಟ್ ನಡೆಯುತ್ತಿದೆ. ಇಲ್ಲಿ ಸುಮಾರು 12 ತಂಡಗಳು ಭಾಗವಹಿಸಲಿದ್ದು, ಆರು ಮುಖಾಮುಖಿ ಪಂದ್ಯ ನಡೆಯಲಿದೆ.

ಈ ಟೂರ್ನಮೆಂಟ್ʼನಲ್ಲಿ ಟೀಂ ಇಂಡಿಯಾಕ್ಕೆ ಕರ್ನಾಟಕದ ಕ್ರಿಕೆಟಿಗ ರಾಬಿನ್‌ ಉತ್ತಪ್ಪ ನಾಯಕರಾಗಿದ್ದಾರೆ. ಈ ಪಂದ್ಯಾವಳಿ ಮುಂಬರುವ ನವೆಂಬರ್ ೧ರಿಂದ 3 ರವರೆಗೆ ನಡೆಯಲಿದೆ. ಉಳಿದಂತೆ, ಭರತ್‌ ಚಿಪ್ಲಿ, ಕೇದಾರ್‌ ಜಾಧವ್‌ ಮನೋಜ್‌ ತಿವಾರಿ, ಶಹಭಾಜ್‌ ನದೀಮ್‌, ಶ್ರೀವತ್ಸ ಗೋಸ್ವಾಮಿ ಹಾಗೂ ಸ್ಟುವರ್ಟ್‌ ಬಿನ್ನಿ ಸ್ಥಾನ ಪಡೆದಿದ್ದಾರೆ.

ಈ ಪಂದ್ಯಾವಳಿಗಳು ಟಿನ್‌ ಕ್ವಾಂಗ್‌ ರೋಡ್‌ ಕ್ರಿಕೆಟ್‌ ಮೈದಾನದಲ್ಲಿ ನಡೆಯಲಿದೆ.

ತಲಾ ಮೂರರಂತೆ ನಾಲ್ಕು ಭಾಗಗಳಾಗಿ 12 ತಂಡಗಳನ್ನು ವಿಭಜಿಸಲಾಗಿದೆ. ರೌಂಡ್‌ರಾಬಿನ್‌ ರೀತಿಯಲ್ಲಿ ಪಂದ್ಯ ನಡೆಯಲಿದ್ದು, ಅಗ್ರ ಎರಡು ತಂಡಗಳು ಕ್ವಾರ್ಟರ್ ಫೈನಲಿಗೆ ಕ್ವಾಲಿಫೈ ಆಗಲಿವೆ. ಇಲ್ಲಿನ ವಿಜೇತರು ಸೆಮೀಸ್‌ ತಲುಪಲಿವೆ. ಸೋತವರು ಪ್ಲೇಟ್‌ ಸೆಮೀಸ್‌ ನಲ್ಲಿ ಸೆಣಸಲಿವೆ.

ಮೂರು ದಿನಗಳಲ್ಲಿ 29 ಪಂದ್ಯಗಳು ನಡೆಯಲಿವೆ.

ಇದನ್ನೂ ಓದಿ: New Zealand Cricket: ನ್ಯೂಜಿಲ್ಯಾಂಡ್‌ ಟೆಸ್ಟ್‌ ತಂಡಕ್ಕೆ ಲ್ಯಾಥಮ್‌ ನೂತನ ನಾಯಕ