Thursday, 12th December 2024

ಗರಿಷ್ಠ ಸಿಕ್ಸರ್ ಸಿಡಿಸಿದ ನಾಲ್ಕನೇ ಆಟಗಾರ ರೋಹಿತ್

ಅಬುಧಾಬಿ: ಮುಂಬೈ ಇಂಡಿಯನ್ಸ್ ನಾಯಕ, ಆರಂಭಿಕ ರೋಹಿತ್ ಶರ್ಮಾ, ಕಳೆದ ಬುಧವಾರ ಕೋಲ್ಕತಾ ನೈಟ್ ವಿರುದ್ಧ ರಾತ್ರಿ ನಡೆದ ಐಪಿಎಲ್ ನ ಐದನೆ ಪಂದ್ಯದಲ್ಲಿ 80 ರನ್ ಗಳಿಸುವ ಹಾದಿಯಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ನಾಲ್ಕನೇ ಆಟಗಾರ ಎಂಬ ಕೀರ್ತಿಗೂ ಭಾಜನರಾದರು.

ಇನಿಂಗ್ಸ್ 14ನೇ ಓವರ್ ನಲ್ಲಿ ಕೋಲ್ಕತಾ ತಂಡದ ಸ್ಪಿನ್ನರ್‌ ಕುಲದೀಪ್ ಯಾದವ್ ಬೌಲಿಂಗ್ ನಲ್ಲಿ ಸತತ ಭರ್ಜರಿ ಸಿಕ್ಸರ್ ಸಿಡಿಸಿದ ರೋಹಿತ್ ಐಪಿಎಲ್ ಇತಿಹಾಸದಲ್ಲಿ 200 ಸಿಕ್ಸರ್ ಪೂರ್ಣಗೊಳಿಸಿದ ನಾಲ್ಕನೇ ಬ್ಯಾಟ್ಸ್ ಮನ್ ಎನಿಸಿಕೊಂಡರು.

ಐಪಿಎಲ್ ನಲ್ಲಿ 37ನೇ ಅರ್ಧ ಶತಕ ಸಿಡಿಸಿದ ರೋಹಿತ್ ಅವರು ಕ್ರಿಸ್ ಗೇಲ್, ಎಬಿಡಿ ವಿಲಿಯರ್ಸ್ ಹಾಗೂ ಎಂ.ಎಸ್. ಧೋನಿಯ ಬಳಿಕ 200 ಹಾಗೂ ಅದಕ್ಕಿಂತ ಹೆಚ್ಚು ಸಿಕ್ಸರ್ ಗಳನ್ನು ಸಿಡಿಸಿದ ಸಾಧನೆ ಮಾಡಿದರು.