ಮುಂಬಯಿ: ಆಸ್ಟ್ರೇಲಿಯಾ ಪ್ರವಾಸದ ವೈಫಲ್ಯದ ಬಗ್ಗೆ ಬಿಸಿಸಿಐ(BCCI) ಅಧಿಕಾರಿಗಳು ಮುಂಬೈನಲ್ಲಿ ನಡೆಸಿದ್ದ ಪರಾಮರ್ಶೆ ಸಭೆಯಲ್ಲಿ ರೋಹಿತ್ ಶರ್ಮ(Rohit Sharma) ಮತ್ತು ವಿರಾಟ್ ಕೊಹ್ಲಿ ಕ್ರಿಕೆಟ್ ಭವಿಷ್ಯದ ಕುರಿತು ಚರ್ಚಿಸಲಾಗಿದ್ದು, ಇದೇ ವೇಳೆ ರೋಹಿತ್ ಭವಿಷ್ಯದ ನಾಯಕನನ್ನು ಹುಡುಕುವಂತೆ ಬಿಸಿಸಿಐಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಎರಡು ಗಂಟೆಗೂ ಅಧಿಕ ಸಮಯದವರೆಗೆ ನಡೆದ ಸಭೆಯಲ್ಲಿ ಬಿಸಿಸಿಐನ ಉನ್ನತ ಅಧಿಕಾರಿಗಳು, ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಉಪಸ್ಥಿತರಿದ್ದರು. ಈ ವೇಳೆ ರೋಹಿತ್ ಮುಂದಿನ ಕೆಲವು ತಿಂಗಳುಗಳ ಕಾಲ ಭಾರತ ತಂಡದ ನಾಯಕತ್ವದಲ್ಲಿ ಮುಂದುವರಿಯುವ ಬಯಕೆಯನ್ನು ಮತ್ತು ಹೊಸ ನಾಯಕನ ಹುಡುಕಾಟವನ್ನು ಮುಂದುವರಿಸುವಂತೆ ಬಿಸಿಸಿಐಗೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ರೋಹಿತ್ ಮುಂದಿನ ಉತ್ತರಾಧಿಕಾರಿಯಾಗಿ ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ ಹೆಸರನ್ನು ಪ್ರಸ್ತಾಪಿಸಿದ್ದರು, ಆದರೆ ಬುಮ್ರಾ ಆಯ್ಕೆಗೆ ಬಿಸಿಸಿಐ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ Champions Trophy 2025: ಭಾರತ-ಪಾಕ್ ಬಿಟ್ಟು ಪ್ರಕಟಗೊಂಡ 6 ತಂಡಗಳ ಆಟಗಾರರ ಪಟ್ಟಿ ಇಲ್ಲಿದೆ
ಕಾರ್ಯದೊತ್ತಡ ತಗ್ಗಿಸುವ ನೆಪ ನೀಡಿ ಭಾರತದ ಪ್ರಮುಖ ಕ್ರಿಕೆಟಿಗರು ಇತ್ತೀಚೆಗಿನ ವರ್ಷಗಳಲ್ಲಿ ಪದೇಪದೆ ಪ್ರಮುಖವಲ್ಲದ ಕೆಲ ಸರಣಿಗಳಿಂದ ಹೊರಗುಳಿಯುವುದು ಸಾಮಾನ್ಯವಾಗಿತ್ತು. ಆದರೆ ಇನ್ನು ಮುಂದೆ ಇಂಥ ವಿಶ್ರಾಂತಿಗಳಿಗೆ ಅವಕಾಶ ನೀಡದಿರಲು ಬಿಸಿಸಿಐ ನಿರ್ಧರಿಸಿದೆ. ಇನ್ನು ಯಾವುದಾದರೂ ದ್ವಿಪಯ ಸರಣಿಯಿಂದ ವಿಶ್ರಾಂತಿ ಬಯಸುವ ಆಟಗಾರ ಸೂಕ್ತ ವೈದ್ಯಕಿಯ ಕಾರಣವನ್ನು ನೀಡುವುದು ಅಗತ್ಯವಾಗಿರುತ್ತದೆ. ಇದರ ಹೊರತಾಗಿ ಬೇರಾವುದೇ ಕಾರಣಗಳಿಂದ ಸರಣಿಗಳಿನ್ನು ತಪ್ಪಿಸಿಕೊಳ್ಳುವಂತಿಲ್ಲ.