ಮುಂಬಯಿ: ಶನಿವಾರ ಸಾಮಾಜಿಕ ಜಾಲತಾಣದಲಿ ಪೋಸ್ಟ್ ಹಾಕುವ ಮೂಲಕ ಎರಡನೇ ಮಗು ಜನಿಸಿರುವ ಖುಷಿಯ ವಿಚಾರವನ್ನು ಟೀಮ್ ಇಂಡಿಯಾದ ರೋಹಿತ್ ಶರ್ಮ(Rohit Sharma) ಹಂಚಿಕೊಂಡಿದ್ದರು. ಇದೀಗ ರೋಹಿತ್ ಪುಟ್ಟ ಮಗುವಿನ ಜತೆಗಿರುವ ಫೋಟೊವೊಂದು ವೈರಲ್ ಆಗಿದೆ. ಪತ್ನಿ ರಿತಿಕಾ(Ritika Sajdeh) ಅಭಿಮಾನಿಗಳ ಟ್ವಿಟರ್ ಎಕ್ಸ್ ಪೇಜ್ನಲ್ಲಿ ರೋಹಿತ್ ಮಗುವನ್ನು ಕೈಯಲ್ಲಿ ಹಿಡಿದು ಸಂತಸದಿಂದ ಇರುವ ಫೋಟೊ ಶೇರ್ ಮಾಡಲಾಗಿದೆ.
ಮುಂಬೈನ ಸ್ಥಳೀಯ ಆಸ್ಪತ್ರೆಯಲ್ಲಿ ರೋಹಿತ್ ಅವರ ಪತ್ನಿ ರಿತಿಕಾ ಶುಕ್ರವಾರ ರಾತ್ರಿ ಗಂಡು ಮಗುವಿಗೆ ಜನ್ಮ ನೀಡಿದ್ದು, 2015ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ರೋಹಿತ್-ರಿತಿಕಾ ದಂಪತಿಗೆ ಈಗಾಗಲೆ ಐದು ವರ್ಷದ ಸಮೈರಾ(SamairaSamaira) ಎಂಬ ಮಗಳಿದ್ದಾಳೆ. 2ನೇ ಮಗುವಿನ ತಂದೆಯಾದ ರೋಹಿತ್ಗೆ ಜೊಹಾನ್ಸ್ಬರ್ಗ್ನಿಂದಲೇ ಟಿ20 ನಾಯಕ ಸೂರ್ಯಕುಮಾರ್, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ ಶುಭಾಶಯ ತಿಳಿಸಿದ್ದರು. ʼಕುಟುಂಬ. ಇಲ್ಲಿ ನಾವು ಈಗ ನಾಲ್ವರು’ಎಂದು ರೋಹಿತ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಮಗು ಹುಟ್ಟಿದ ವಿಚಾರವನ್ನು ಬಹಿರಂಗ ಪಡಿಸಿದ್ದರು. ಮಗುವಿಗೆ ಹೆಸರು ಇನ್ನಷ್ಟೇ ಇಡಬೇಕಿದೆ. ಈ ಹಿಂದೆ ಕೊಹ್ಲಿ, ಬುಮ್ರಾ ತಂದೆಯಾದ ದಿನವೇ ಮಗುವಿನ ಹೆಸರನ್ನು ಪ್ರಕಟಿಸಿದ್ದರು.
ಇದನ್ನೂ ಓದಿ Border Gavaskar Trophy: ಪರ್ತ್ ಟೆಸ್ಟ್ನಲ್ಲಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಭಾರತಕ್ಕೆ ಓಪನರ್ ಯಾರು?
ರೋಹಿತ್ ಭಾರತ ತಂಡ ಸೇರ್ಪಡೆಯ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿಯಿಲ್ಲ. ಮೂಲಗಳ ಪ್ರಕಾರ ಮೊದಲ ಪಂದ್ಯಕ್ಕೆ ರೋಹಿತ್ ಶರ್ಮ ಅಲಭ್ಯರಾಗಲಿದ್ದಾರೆ ಎನ್ನಲಾಗಿದೆ. ಈಗಾಗಲೇ ರೋಹಿತ್ ತಮ್ಮ ನಿರ್ಧಾರವನ್ನು ಬಿಸಿಸಿಐ ಮತ್ತು ಆಯ್ಕೆಗಾರರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಮೊದಲ ಟೆಸ್ಟ್ ಆರಂಭಕ್ಕೆ ಇನ್ನು 5 ದಿನ ಬಾಕಿಯಿದೆ. ರೋಹಿತ್ ಮೊದಲ ಪಂದ್ಯಕ್ಕೆ ಅಲಭ್ಯರಾದರೆ ಇವರ ಸ್ಥಾನದಲ್ಲಿ ಗಾಯದಿಂದ ಚೇತರಿಸಿಕೊಂಡಿರುವ ಕನ್ನಡಿಗ ಕೆ.ಎಲ್ ರಾಹುಲ್ ಆರಂಭಿಕನಾಗಿ ಯಶಸ್ವಿ ಜೈಸ್ವಾಲ್ ಜತೆ ಭಾರತದ ಇನಿಂಗ್ಸ್ ಆರಂಭಿಸಬಹುದು. ತಂಡವನ್ನು ಜಸ್ಪ್ರೀತ್ ಬುಮ್ರಾ ಮುನ್ನಡೆಸಲಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಭಾರತ ಟೆಸ್ಟ್ ತಂಡ
ರೋಹಿತ್ ಶರ್ಮ (ನಾಯಕ), ಜಸ್ಪ್ರಿತ್ ಬುಮ್ರಾ, ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್, ರಿಷಭ್ ಪಂತ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್, ಆರ್ ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ನಿತೇಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್.