Thursday, 12th December 2024

ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದ ರಾಯಲ್ಸ್

ಪುಣೆ: ಬ್ಯಾಟರ್‌ಗಳು ಕೈಕೊಟ್ಟ ಪರಿಣಾಮ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ರಾಜಸ್ಥಾನ ರಾಯಲ್ಸ್ ತಂಡದ ಎದುರು 29 ರನ್‌ ಗಳಿಂದ ಸೋಲು ಕಂಡಿತು.

ಬೌಲರ್ ಕುಲದೀಪ್ ಸೆನ್ (20ಕ್ಕೆ 4) ಹಾಗೂ ಅನುಭವಿ ಸ್ಪಿನ್ನರ್ ಆರ್.ಅಶ್ವಿನ್ (17ಕ್ಕೆ 3) ಜೋಡಿಯ ಮಾರಕ ದಾಳಿಗೆ ನಲುಗಿದ ಆರ್‌ಸಿಬಿ ಸಾಧಾರಣ ಮೊತ್ತ ಬೆನ್ನಟ್ಟಲು ವಿಫಲವಾಯಿತು. ಬಳಿಕ ಆರ್‌ಸಿಬಿ 19.3 ಓವರ್‌ಗಳಲ್ಲಿ 115 ರನ್‌ಗಳಿಗೆ ಸರ್ವಪತನ ಕಂಡಿತು.

ಇದರಿಂದ ಆರ್‌ಸಿಬಿ ಸತತ 2ನೇ ಸೋಲನುಭವಿಸಿದರೆ, ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದ ಸಂಜು ಸ್ಯಾಮ್ಸನ್ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಆರ್ಸಿಬಿ ಎದುರು ಮೊದಲ ಹಣಾಹಣಿಯಲ್ಲಿ ಸೋಲು ಕಂಡಿದ್ದ ರಾಜಸ್ಥಾನ ರಾಯಲ್ಸ್ ತಂಡ ಸೇಡು ತೀರಿಸಿ ಕೊಂಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ಆರಂಭಿಕ ಆಘಾತದ ನಡುವೆಯೂ ರಿಯಾನ್ ಪರಾಗ್ (56*ರನ್) ಅರ್ಧಶತಕದಾಟದ ನೆರವಿನಿಂದ 8 ವಿಕೆಟ್‌ಗೆ 144 ರನ್ ಪೇರಿಸಿತು.