Sunday, 15th December 2024

ಡೆಲ್ಲಿಗೆ ಸೋಲುಣಿಸುವುದೇ ರಾಜಸ್ಥಾನ ?

ದುಬೈ: ಯುಎಇನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ.

ಎರಡು ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿದ್ದು ಹಿಂದಿನ ಪಂದ್ಯದಲ್ಲಿ ಡೆಲ್ಲಿ ಜಯಭೇರಿ ಬಾರಿಸುವಲ್ಲಿ ಯಶಸ್ವಿಯಾಗಿತ್ತು. ಶಾರ್ಜಾದಲ್ಲಿ ಈ ಹಿಂದೆ ನಡೆದಿದ್ದ ಮುಖಾಮುಖಿ ಯಲ್ಲಿ ಡೆಲ್ಲಿ 184/8 ರನ್‌ ಪೇರಿಸಿ 46 ರನ್‌ಗಳ ಅಂತರ ದಿಂದ ರಾಜಸ್ಥಾನ್ ತಂಡವನ್ನು ಮಣಿ ಸಿತ್ತು. ಶಿಮ್ರಾನ್ 24 ಎಸೆತಗಳಲ್ಲಿ 45 ರನ್ ಹಾಗೂ ಕಗಿಸೋ ರಬಡ 3 ವಿಕೆಟ್ ಸಾಧನೆ ಮಾಡಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ ಕಾರಣರಾಗಿದ್ದರು.

ರಾಜಸ್ಥಾನ್ 11 ರಲ್ಲಿ ಗೆಲುವು ಕಂಡಿದ್ದರೆ ಡೆಲ್ಲಿ 10 ಪಂದ್ಯಗಲಲ್ಲಿ ಗೆದ್ದಿದೆ. ಈ ಮೂಲಕ ರಾಜ ಸ್ಥಾನ್ ತಂಡ ಸಣ್ಣ ಮುನ್ನಡೆ ಯನ್ನು ಹೊಂದಿದೆ. ಈ ಬಾರಿಯ ಆವೃತ್ತಿಯಲ್ಲಿ ಈ ಎರಡು ತಂಡಗಳ ಪೈಕಿ ಡೆಲ್ಲಿ ತಂಡದ ನಾಯಕ ಶ್ರೇಯಸ್ ಐಯ್ಯರ್ 245 ರನ್ ಗಳಿಸಿದ್ದಾರೆ.

ರಾಜಸ್ಥಾನ್ ತಂಡದ ಸಂಜು ಸ್ಯಾಮ್ಸನ್ ಹಾಗೂ ಡೆಲ್ಲಿ ತಂಡದ ಪೃಥ್ವಿ ಶಾ ತಲಾ 202 ರನ್ ಗಳಿಸಿ ಹೆಚ್ಚು ರನ್ ಗಳಿಸಿದ ಆಟಗಾರ ರಾಗಿದ್ದಾರೆ. ಬೌಲಿಮಗ್ ವಿಭಾಗದಲ್ಲಿ ಡೆಲ್ಲಿ ತಂಡದ ಕಗಿಸೋ ರಬಡಾ 17 ವಿಕೆಟ್ ಕಿತ್ತು ಮಿಂಚಿದ್ದರೆ ಆರ್‌ಆರ್ ತಂಡದ ಜೋಫ್ರಾ ಆರ್ಚರ್ 9 ವಿಕೆಟ್ ಪಡೆದಿದ್ದಾರೆ.