ನವದೆಹಲಿ: ಭಾರತದ ಮಾಜಿ ಕ್ರಿಕೆಟರ್ ಸಲೀಂ ದುರಾನಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಲೀಂ ದುರಾನಿಯವರು ಮೊದಲಿನಿಂದಲೂ ಗುಜರಾತ್ ಜತೆಗೆ ಗಟ್ಟಿಯಾದ ಒಡನಾಟ ಹೊಂದಿದ್ದರು. ಗುಜರಾತ್ ಮತ್ತು ಸೌರಾಷ್ಟ್ರ ಪರ ಆಟವಾಡಿದ್ದರು. ಬಳಿಕ ಗುಜರಾತ್ನಲ್ಲೇ ನೆಲೆಸಿದ್ದರು. ನನಗೂ ಅವರೊಂದಿಗೆ ಮಾತನಾಡುವ ಅವಕಾಶ ಸಿಕ್ಕಿತ್ತು. ಅವರ ಬಹುಮುಖ ವ್ಯಕ್ತಿತ್ವದಿಂದ ನಾನು ಪ್ರಭಾವಿತನಾಗಿದ್ದೇನೆ. ಅವರ ಅಗಲುವಿಕೆ ಕಾಡುತ್ತದೆ.
ಸಲೀಂ ದುರಾನಿ ಜೀ ಅವರು ಕ್ರಿಕೆಟ್ನ ದಂತಕಥೆ. ಅವರೇ ಒಬ್ಬ ಇನ್ಸ್ಟಿಟ್ಯೂಶನ್ ಆಗಿದ್ದರು. ಕ್ರಿಕೆಟ್ ಜಗತ್ತಿನಲ್ಲಿ ಭಾರತ ಬೆಳೆಯಲು ಮಹತ್ವದ ಕೊಡುಗೆ ಕೊಟ್ಟಿದ್ದಾರೆ. ಅವರ ಸಾವು ನೋವು ತಂದಿದೆ. ಸಲೀಂ ದುರಾನಿ ಆತ್ಮ ಶಾಂತಿಯಲ್ಲಿ ನೆಲೆಸಲಿ ಎಂದು ಟ್ವೀಟ್ ಮಾಡಿದ್ದಾರೆ.