Monday, 23rd December 2024

Sania Mirza: ದುಬೈನಲ್ಲಿ ಜತೆಯಾಗಿ ಕಾಣಿಸಿಕೊಂಡ ಶಮಿ-ಸಾನಿಯಾ ಮಿರ್ಜಾ!

ಮುಂಬಯಿ: ಭಾರತ ತಂಡದ ವೇಗಿ ಮೊಹಮ್ಮದ್‌ ಶಮಿ(Mohammed Shami) ಮತ್ತು ಭಾರತದ ಮಾಜಿ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ(Sania Mirza) ಮದುವೆಯಾಗಲಿದ್ದಾರೆ ಎಂದು ವದಂತಿ ಮತ್ತೆ ಹಬ್ಬಿದೆ. ಇದಕ್ಕೆ ಸಂಬಂಧಿಸಿದ ಕೆಲ ಫೋಟೊಗಳು ಕೂಡ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಶಮಿ ತಮ್ಮ ಪತ್ನಿಗೆ ಈಗಾಗಲೇ ವಿಚ್ಚೇದನ ನೀಡಿದ್ದಾರೆ. ಸಾನಿಯಾ ಮಿರ್ಜಾ (sania mirza) ಕೂಡಾ ಪತಿ ಶೋಯೆಬ್ ಮಲಿಕ್ ಅವರಿಂದ ಕೆಲ ತಿಂಗಳ ಹಿಂದೆ ದೂರವಾಗಿದ್ದರು. ಹೀಗಾಗಿ ಶಮಿ ಮತ್ತು ಸಾನಿಯಾ ಮದುವೆಯಾಗಲಿದ್ದಾರೆ ಎಂದು ಕೆಲ ತಿಂಗಳ ಹಿಂದೆ ಭಾರಿ ಸುದ್ದಿಯಾಗಿತ್ತು. ಈ ಕುರಿತ ವರದಿಗಳು ಕೂಡ ಹಲವು ಮಾಧ್ಯಮಗಳಲ್ಲಿ ಪ್ರಸಾರಗೊಂಡಿತ್ತು. ಬಳಿಕ ಶಮಿ ಸ್ಪಷ್ಟನೆ ನೀಡಿ ಇದು ಆಧಾರರಹಿತ ಸುದ್ದಿ ಎಂದು ಹೇಳಿದ್ದರು. ಇದಾದ ಬಳಿಕ ಮದುವೆ ವದಂತಿ ತಣ್ಣಗಾಗಿತ್ತು. ಇದೀಗ ಮತ್ತೆ ನೆಟ್ಟಿಗರು ಶಮಿ ಮತ್ತು ಸಾನಿಯಾ ಮದುವೆಯಾಗಲಿದ್ದಾರೆ ಎಂದು ಹೇಳಲಾರಂಭಿಸಿದ್ದಾರೆ.

ವೈರಲ್‌ ಆಗುತ್ತಿರುವ ಈ ಫೋಟೋಗಳಲ್ಲಿ ಸಾನಿಯಾ ಹಾಗೂ ಮೊಹಮ್ಮದ್‌ ಶಮಿ ಕ್ರಿಸ್‌ಮಸ್‌ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಸಲಿಗೆ ವೈರಲ್‌ ಆಗುತ್ತಿರುವ ಈ ಫೋಟೋಗಳನ್ನು ಎಐ ತಂತ್ರಜ್ಞಾನದಿಂದ ರಚಿಸಲಾಗಿದ್ದು ಈ ಜೋಡಿ ದುಬೈನಲ್ಲಿ ರಹಸ್ಯವಾಗಿ ಡೇಟಿಂಗ್‌ ನಡೆಸುತ್ತಿದ್ದಾರೆ ಎಂದು ನೆಟ್ಟಿಗರು ಹೇಳಿದ್ದಾರೆ. ಆದರೆ ಅಸಲಿಗೆ ಸಾನಿಯಾ ಮಿರ್ಜಾ ತಮ್ಮ ವೃತ್ತಿಪರ ಕೆಲಸದಲ್ಲಿ ನಿರತರಾಗಿದ್ದರೆ, ಶಮಿ ಗಾಯದಿಂದ ಚೇತರಿಸಿಕೊಂಡು ಮತ್ತೆ ಟೀಮ್‌ ಇಂಡಿಯಾಕ್ಕೆ ಕಮ್‌ಬ್ಯಾಕ್‌ ಮಾಡಲು ದೇಶೀಯ ಕ್ರಿಕೆಟ್‌ ಮತ್ತು ಎನ್‌ಸಿಎಯಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.

ಇದನ್ನೂ ಓದಿ AUS vs IND: ಪ್ರಾಕ್ಟೀಸ್‌ ಪಿಚ್‌ ಬಗ್ಗೆ ಭಾರತ ತಂಡ ಅತೃಪ್ತಿ

ಕೆಲವು ತಿಂಗಳ ಹಿಂದೆ ಯೂಟ್ಯೂಬರ್ ಶುಭಂಕರ್ ಮಿಶ್ರಾ ಅವರೊಂದಿಗಿನ ಸಂವಾದದಲ್ಲಿ ಶಮಿ ಅವರು ಸಾನಿಯಾ ಜತೆಗಿನ ಮದುವೆಯ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದರು. ಜತೆಗೆ ನೆಟ್ಟಿಗರಿಗೆ ಎಚ್ಚರಿಯನ್ನು ಕೂಡ ನೀಡಿದ್ದರು.

‘ಸಾಮಾಜಿಕ ಜಾಲತಾಣದಲ್ಲಿ ನನ್ನ ಮತ್ತು ಸಾನಿಯಾ ಮದುವೆಯ ವಿಚಾರವಾಗಿ ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ. ಇಂತಹ ಮೀಮ್ಸ್​ಗಳು ಕೆಲವರಿಗೆ ಮನರಂಜನೆ ನೀಡಬಹುದು. ಆದರೆ, ಅದರಿಂದ ಉಂಟಾಗುವ ಕೆಟ್ಟ ಪರಿಣಾಮವನ್ನು ಒಮ್ಮೆ ಯೋಚಿಸಿದರೆ ಉತ್ತಮ. ಸಾಮಾಜಿಕ ಜಾಲತಾಣ ಇರುವುದು ಒಳ್ಳೆಯ ಉದ್ದೇಶಗಳನ್ನು ತಿಳಿಸುವ ಸಲುವಾಗಿ. ಯಾರೇ ಆದರೂ ಜಾಲತಾಣದಲ್ಲಿ ಪೋಸ್ಟ್​ ಮಾಡುವಾಗ ಅದಕ್ಕೆ ಜವಾಬ್ದಾರರಾಗಿರಬೇಕು. ಇಂತಹ ಆಧಾರರಹಿತ ಸುದ್ದಿಗಳನ್ನು ಹರಡುವುದನ್ನು ಮೊದಲು ನಿಲ್ಲಿಸಿ’ ಎಂದು ಹೇಳಿದ್ದರು. ಆದರೂ ಕೂಡ ನೆಟ್ಟಿಗರು ತಮ್ಮ ಕುಕೃತ್ಯ ಮುಂದುವರಿಸಿದ್ದಾರೆ.