ದುಬೈ : ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಶಿಖರ್ ಧವನ್ ತಮ್ಮ ಎಂದಿನ ಭರ್ಜರಿ ಫಾರ್ಮನ್ನು ಪಂಜಾಬ್ ವಿರುದ್ಧವೂ ಮುಂದುವರೆಸಿದ್ದಾರೆ.
ಐಪಿಎಲ್ ನಲ್ಲಿ 5000 ರನ್ ಪೂರ್ತಿಗೊಳಿಸಿದ 5 ನೇ ಆಟಗಾರನೆಂಬ ಹೆಗ್ಗಳಿಕೆ ಧವನ್’ಗೆ ದಕ್ಕಿದೆ. ಶಿಖರ್ ಧವನ್ ಕಳೆದ ಮೂರು ಪಂದ್ಯಗಳಿಂದ ಉತ್ತಮ ಬ್ಯಾಟಿಂಗ್ ಲಯವನ್ನು ಪಡೆದುಕೊಂಡಿದ್ದಾರೆ.
ಮೂರು ಪಂದ್ಯದಲ್ಲಿ 69, 57 ಹಾಗೂ ಭರ್ಜರಿ 101 ರನ್ ಗಳಿಸಿದ್ದಾರೆ. ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ತಮ್ಮ ರನ್ ಗಳಿಸುವ ನಾಗಲೋಟ ಮುಂದುವರೆಸಿದ್ದಾರೆ.
ಪಂಜಾಬ್ ಪಂದ್ಯಕ್ಕೂ ಮೊದಲು ಈ ದಾಖಲೆಯನ್ನು ಗಳಿಸುವಲ್ಲಿ ಧವನ್ 62 ರನ್ ಹಿಂದೆ ಇದ್ದರು. ಪಂಜಾಬ್ ವಿರುದ್ಧ ಪಂದ್ಯ ದಲ್ಲಿ ಭರ್ಜರಿ ಶತಕಗಳಿಸುವುದರ ಜೊತೆಗೆ 5000 ರನ್ ಗಳಿಸಿದ 5 ನೇ ಆಟಗಾರನಾಗಿಯೂ ಹೊರಹೊಮ್ಮಿದರು.
ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ 5759 ರನ್, ಚೆನ್ನೈ ತಂಡದ ಸುರೇಶ್ ರೈನಾ ಈ ಬಾರಿ ಐಪಿಎಲ್ ನಲ್ಲಿ ಇಲ್ಲದೆ ಇದ್ರು, 5368 ರನ್ ಗಳಿಸಿ ದಾಖಲೆಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ 5158 ರನ್ ಹಾಗೂ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ 5037 ರನ್ ನೊಂದಿಗೆ ದಾಖಲೆಯ ಪಟ್ಟಿ ಯಲ್ಲಿ ಹೆಸರುಗಳಿಸಿದ್ದಾರೆ.