Monday, 16th September 2024

ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್ ಅಖ್ತರ್’ಗೆ ಅವಮಾನ

ಕರಾಚಿ: ಟಿವಿ ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್ ಅಖ್ತರ್ ಅವರನ್ನು ನಿರೂಪಕ ಅವಮಾನಿಸಿ ಸ್ಟುಡಿಯೋದಿಂದ ಹೊರಹೋಗು ವಂತೆ ಹೇಳಿ ಅವಮಾನಿಸಿದ ಘಟನೆ ನಡೆದಿದೆ.

ನ್ಯೂಜಿಲೆಂಡ್ ಹಾಗೂ ಪಾಕ್ ನಡುವಿನ ಟಿ20 ವಿಶ್ವಕಪ್ ಪಂದ್ಯದ ವಿಶ್ಲೇಷಣೆ ವೇಳೆ 46 ವರ್ಷದ ಶೋಯಿಬ್ ಅಖ್ತರ್ ಅವರನ್ನು ಕೆಟ್ಟದಾಗಿ ನಡೆಸಿಕೊಂಡ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದೆ.

ವೆಸ್ಟ್ ಇಂಡೀಸ್ ದಂತಕಥೆ ವಿವಿಯನ್ ರಿಚರ್ಡ್ಸ್, ಡೇವಿಡ್ ಗೋವರ್, ಪಾಕ್‌ನ ರಶೀದ್ ಲತ್ೀ, ಉಮರ್ ಗುಲ್, ಅಕೀಬ್ ಜಾವೆದ್ ಹಾಗೂ ಪಾಕ್ ಮಹಿಳಾ ತಂಡದ ನಾಯಕಿ ಸನಾ ಮೀರ್ ಹಾಗೂ ಶೋಯಿಬ್ ಅಖ್ತರ್ ಒಳಗೊಂಡ ಕಾರ್ಯಕ್ರಮವನ್ನು ಪಿಟಿವಿಯ ಖ್ಯಾತ ಕ್ರಿಕೆಟ್ ತಜ್ಞ, ಇತಿಹಾಸಕಾರ ನೌಮಾನ್ ನೈಯಾಜ್ ನಡೆಸಿ ಕೊಡುತ್ತಿದ್ದರು. ಚರ್ಚೆ ವೇಳೆ ಅಖ್ತರ್ ಮಾತಿಗೆ ಸಿಟ್ಟಾದ ನೌಮಾನ್ ನೈಯಾಜ್, ಸ್ಟುಡಿಯೋದರಿಂದ ನೀವು ಹೊರ ನಡೆಯಬಹುದು ಎಂದು ಸಿಟ್ಟಿನಿಂದ ಹೇಳಿದ್ದಾರೆ.

ಮುಜುಗರದಿಂದಲೇ ಸ್ಟುಡಿಯೊದಿಂದ ಹೊರನಡೆದಿರುವ ಅಖ್ತರ್, ದೇಶದ ಎದುರಲ್ಲಿ ನೇರಪ್ರಸಾರದ ವೇಳೆ ನನಗೆ ಅವಮಾನವಾಗಿದೆ. ಇದಕ್ಕಾಗಿ ಪಿಟಿವಿಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *