ಓವಲ್: ಅಂಪೈರ್ ನಿರ್ಧಾರವನ್ನು ಬಹಿರಂಗವಾಗಿ ಟೀಕಿಸಿದ್ದ ಭಾರತ ತಂಡದ ಆಟಗಾರ ಶುಭ್ಮನ್ ಗಿಲ್ಗೆ ಐಸಿಸಿ ಭಾರೀ ದಂಡ ವಿಧಿಸಿದೆ.
ಕ್ರಿಕೆಟಿಗನ ಈ ನಡೆ ದುಬಾರಿಯಾಗಿದ್ದು ಐಸಿಸಿ ಭಾರೀ ದಂಡ ವಿಧಿಸಿದೆ. ಅಲ್ಲದೇ, ನಿಧಾನಗತಿಯ ಬೌಲಿಂಗ್ ಕಾರಣಕ್ಕಾಗಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳಿಗೂ ದಂಡದ ಬರೆ ಬಿದ್ದಿದೆ.
ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಗಿಲ್ 18 ರನ್ ಗಳಿಸಿ ಆಡುತ್ತಿದ್ದಾಗ ಬೋಲೆಂಡ್ ಎಸೆತದಲ್ಲಿ ಬ್ಯಾಟ್ಗೆ ಸವರಿ ಕೊಂಡು ಹೋದ ಚೆಂಡು ಅಲ್ಲೇ ಕಾಯುತ್ತಿದ್ದ ಕ್ಯಾಮರೂನ್ ಗ್ರೀನ್ ಕೈ ಸೇರಿತು. ಅದ್ಭುತ ಯತ್ನದಿಂದ ಗ್ರೀನ್ ಚೆಂಡನ್ನು ಹಿಡಿದರು. ಆದರೆ, ಅದು ನೆಲಕ್ಕೆ ಬಡಿದಂತೆ ಟಿವಿ ರಿಪ್ಲೈಗಳಲ್ಲಿ ಕಾಣುತ್ತಿತ್ತು. ಆದರೆ, ಮೂರನೇ ಅಂಪೈರ್ ಐಸಿಸಿ ನಿಯಮಗಳನ್ವಯ ಔಟ್ ಎಂದು ಘೋಷಿಸಿದರು.
ಚೆಂಡು ಬೆರಳುಗಳ ಮಧ್ಯೆ ನೆಲಕ್ಕೆ ತಾಕುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸಿದವು. ವೀರೇಂದ್ರ ಸೆಹ್ವಾಗ್, ವಾಸೀಂ ಜಾಫರ್ ಸೇರಿದಂತೆ ಹಲವಾರು ಹಿರಿಯ ಕ್ರಿಕೆಟಿಗರು ಟೀಕಿಸಿದ್ದರು.
ಸ್ವತಃ ಶುಭ್ಮನ್ ಗಿಲ್ ಕೂಡ ಪಂದ್ಯದ ಮಧ್ಯೆಯೇ ಈ ಚಿತ್ರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಅಂಪೈರ್ ನಿರ್ಧಾರವನ್ನು ದೂಷಿಸಿದ್ದರು. ಯುವ ಕ್ರಿಕೆಟಿಗನಿಗೆ ಪಂದ್ಯದ ಮೊತ್ತದ ಜೊತೆಗೆ 15 ಪ್ರತತಿಶತ ಹೆಚ್ಚು ವರಿ ದಂಡ ವಿಧಿಸಿದೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನಿಗದಿತ ಸಮಯಕ್ಕಿಂತಲೂ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ್ದಕ್ಕೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ದಂಡ ವಿಧಿಸಿದೆ. ಭಾರತ ಮೀಸಲು ಅವಧಿಗಿಂತ 5 ಓವರ್ ಹಿಂದೆ ಇತ್ತು.
ಹೀಗಾಗಿ ತಂಡಕ್ಕೆ ಶೇ.100ರಷ್ಟು ದಂಡ ಹಾಕಲಾಗಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ನಿಗದಿತ ಸಮಯಕ್ಕಿಂತಲೂ 4 ಓವರ್ ಕಡಿಮೆ ಬೌಲ್ ಮಾಡಿತ್ತು. ಹೀಗಾಗಿ ಆ ತಂಡಕ್ಕೆ ಪಂದ್ಯ ಶುಲ್ಕದ ಮೇಲೆ ಶೇ. 80 ರಷ್ಟು ದಂಡವನ್ನು ವಿಧಿಸಲಾಗಿದೆ.