Sunday, 15th December 2024

ಸಹಾಯಕ ಕೋಚ್ ಸ್ಥಾನಕ್ಕೆ ಸೈಮನ್ ಕ್ಯಾಟಿಚ್ ರಾಜೀನಾಮೆ

ಹೈದರಾಬಾದ್: ಸನ್​ರೈಸರ್ಸ್ ಹೈದರಾಬಾದ್ ತಂಡದ ಸಹಾಯಕ ಕೋಚ್ ಸ್ಥಾನದಲ್ಲಿದ್ದ ಆಸ್ಟ್ರೇಲಿ ಯಾದ ಮಾಜಿ ದಿಗ್ಗಜ ಸೈಮನ್ ಕ್ಯಾಟಿಚ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಗಾಗಿ ಇತ್ತೀಚೆಗಷ್ಟೆ ನಡೆದ ಐಪಿಎಲ್2022 ಮೆಗಾ ಹರಾಜಿನಲ್ಲಿ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಕೆಲ ಸ್ಟಾರ್ ಆಟಗಾರರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು. ಆದರೆ, ಇದೀಗ ತಂಡಕ್ಕೆ ದೊಡ್ಡ ಆಘಾತ ಉಂಟಾಗಿದೆ. ಸಹಾಯಕ ಕೋಚ್ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾದ ಮಾಜಿ ದಿಗ್ಗಜ ಸೈಮನ್ ಕ್ಯಾಟಿಚ್ ರಾಜೀನಾಮೆ ನೀಡಿದ್ದಾರೆ. ಕಳೆದ ಡಿಸೆಂಬರ್​ನಲ್ಲಿ ಎಸ್​ಆರ್​ಹೆಚ್ ಫ್ರಾಂಚೈಸಿ ಕ್ಯಾಟಿಚ್ ಅವರನ್ನು ಹೈದರಾಬಾದ್ ತಂಡದ ಸಹಾಯಕ ಕೋಚ್ ಆಗಿ ಆಯ್ಕೆ ಮಾಡಿತ್ತು.

ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಹರಾಜಿಗೆ ಸಂಬಂಧ ಪಟ್ಟಂತೆ ಯಾವುದೇ ಪೂರ್ವ ಯೋಜನೆ ಮಾಡದೆ ಕಡೆಗಣಿಸಿದ ಕಾರಣ ಕ್ಯಾಟಿಚ್ ಅವರು ಗುಡ್ ಬೈ ಹೇಳಿದ್ದಾರೆ ಎಂದು ಹೇಳಲಾಗಿದೆ. ಐಪಿಎಲ್ 2021 ಮುಗಿದ ಬೆನ್ನಲ್ಲೆ ವೈಯಕ್ತಿಕ ಕಾರಣಗಳಿಂದ ಸೈಮನ್‌ ಕ್ಯಾಟಿಚ್‌ ಆರ್‌ಸಿಬಿ ತಂಡದ ಮುಖ್ಯ ಕೋಚ್‌ ಹುದ್ದೆಗೆ ರಾಜೀನಾಮೆ ನೀಡಿದ್ದರು.