Saturday, 14th December 2024

ಸೂರ್ಯ ಅರ್ಧಶತಕ: ಕಿವೀಸ್ ವಿರುದ್ಧ ಟೀಂ ಇಂಡಿಯಾ ಗೆಲುವು

ಜೈಪುರ: ನ್ಯೂಜಿಲೆಂಡ್ ವಿರುದ್ಧದ ಭಾರತ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಐದು ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ ಸವಾಯ್ ಮನ್ ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ  ಮಾರ್ಟಿನ್ ಗುಪ್ಟಿಲ್ ಅವರ ಆಕರ್ಷಕ 70 ಮತ್ತು ಮಾರ್ಕ್ ಚಾಪ್ ಮನ್ ಅವರ 63 ರನ್ ಗಳ ನೆರವಿನಿಂದ 164 ರನ್ ಕಲೆ ಹಾಕಿತು.

ಪ್ರವಾಸಿಗರು ನೀಡಿದ್ದ ಸವಾಲಿನ ಗುರಿಯನ್ನು ಬೆನ್ನಟ್ಟಿದ್ದ ಟೀಂ ಇಂಡಿಯಾ ಎರಡು ಎಸೆತ ಬಾಯಿ ಇರುವಂತೆಯೇ, (19.4 ಓವರ್) 5 ವಿಕೆಟ್ ನಷ್ಟಕ್ಕೆ 166 ರನ್ ಗಳಿಸುವುದರೊಂದಿಗೆ ವಿಜಯದ ನಗೆ ಬೀರಿತು.

ಆರಂಭಿಕ ಕೆ.ಎಲ್. ರಾಹುಲ್ 15, ರೋಹಿತ್ ಶರ್ಮಾ 48, ಸೂರ್ಯ ಕುಮಾರ್ ಯಾದವ್ ಆಕರ್ಷಕ 62 ಹಾಗೂ ರಿಷಭ್ ಪಂತ್ 17 ನೆರವಿನೊಂದಿಗೆ ಟೀಂ ಇಂಡಿಯಾ ಗೆಲುವು ಸಾಧಿಸಿತು.

ಈ ಮೂಲಕ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ.