ಅಬುಧಾಬಿ: ಪಾಕಿಸ್ಥಾನ್ ಸೂಪರ್ ಲೀಗ್ ನಲ್ಲಿ ಆಡುತ್ತಿರುವ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್
ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಮತ್ತೋರ್ವ ಆಟಗಾರನಿಗೆ ಢಿಕ್ಕಿ ಹೊಡೆದು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪಿಎಸ್ ಎಲ್ ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ಆಡುವ ಪ್ಲೆಸಿಸ್ ಪೇಶಾವರ್ ಜಲ್ಮಿ ವಿರುದ್ಧ ಶನಿವಾರದ ಪಂದ್ಯದಲ್ಲಿ ಪಾಕ್ ಆಟಗಾರ ಮೊಹಮ್ಮದ್ ಹಸ್ನೈನ್ ಗೆ ಢಿಕ್ಕಿ ಹೊಡೆದಿದ್ದಾರೆ. ಬೌಂಡರಿ ತಡೆಯಲು ಫಾಪ್ ಡೈವ್ ಹೊಡೆದಿದ್ದಾರೆ. ಈ ವೇಳೆ ಎದುರಿನಿಂದ ಬಂದ ಹಸ್ನೈನ್ ಕಾಲು ಗಂಟಿಗೆ ಫಾಫ್ ತಲೆ ಬಡಿದಿದೆ. ಕೂಡಲೇ ಕುಸಿದು ಬಿದ್ದರು.
ಅವರನ್ನು ಚಿಕಿತ್ಸೆಗೆ ಅಬುಧಾಬಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದುಮಾಧ್ಯಮಗಳು ವರದಿ ಮಾಡಿದೆ.