Saturday, 14th December 2024

ಸನ್‌ರೈಸರ್ಸ್ ಬೌಲರ್‌ ಟಿ.ನಟರಾಜನ್ ತಂದೆಯಾದ ಸಂಭ್ರಮ

ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪ್ರಮುಖ ವಿಕೆಟ್ ಪಡೆದ ಟಿ. ನಟರಾಜನ್‌ ಎಸ್‌ಆರ್‌ಹೆಚ್ ಗೆಲು ವಿನ ಸಂಭ್ರಮದ ಜೊತೆಗೆ ಅವರ ಪತ್ನಿ ಮಗುವಿಗೆ ಜನ್ನ ನೀಡಿದ್ದು ಅವರ ಸಂತೋಷವನ್ನು ಇಮ್ಮಡಿಗೊಳಿಸಿದೆ.

ಶುಕ್ರವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ಆರು ವಿಕೆಟ್‌ಗಳಿಂದ ಗೆಲುವು ಸಾಧಿಸಿ ಕ್ವಾಲಿಫೈ ಯರ್ ಪ್ರವೇಶಿಸಿತು. ಮತ್ತೊಂದೆಡೆ ಸೋತ ಆರ್‌ಸಿಬಿ ಈ ಬಾರಿಯು ಕಪ್ ಗೆಲ್ಲಲು ಸಾಧ್ಯವಾಗದೆ ನಿರಾಸೆಗೊಂಡಿತು.

ಆರ್‌ಸಿಬಿ ಪರ ಏಕಾಂಗಿಯಾಗಿ ಹೋರಾಟ ನಡೆಸಿದ್ದು ಎಬಿ ಡಿವಿಲಿಯರ್ಸ್, ಅರ್ಧಶತಕ ಸಿಡಿಸಿ ತಂಡಕ್ಕೆ ಆಧಾರವಾಗಿದ್ದ ಎಬಿಡಿ ಕೊನೆಯ ಎರಡು ಓವರ್‌ ಇರುವಂತೆ ಎಸ್‌ಆರ್‌ಹೆಚ್‌ ಬೌಲರ್ ಟಿ. ನಟರಾಜನರ್ ಅದ್ಭುತ ಯಾರ್ಕರ್‌ಗೆ ಕ್ಲೀನ್ ಬೌಲ್ಡ್ ಆದ್ರು. ಆ ಮೂಲಕ ಆರ್‌ಸಿಬಿ ಸ್ಕೋರ್‌ ಅಂದುಕೊಂಡಿದ್ದಕ್ಕಿಂತ ಕಡಿಮೆಯಾಗಿ ಸೋಲನ್ನಪ್ಪಿಕೊಂಡಿತು.

ಎಸ್‌ಆರ್‌ಹೆಚ್ ನಾಯಕ ಡೇವಿಡ್ ವಾರ್ನರ್ ಸ್ವತಃ ಈ ಸಂತೋಷದ ಸುದ್ದಿಯನ್ನು ಪ್ರಕಟಿಸಿದರು. ಚಾಲೆಂಜರ್ಸ್ ವಿರುದ್ಧ ಆರು ವಿಕೆಟ್‌ಗಳ ಅದ್ಭುತ ಜಯಗಳಿಸಿದ ನಂತರ ಅವರು ನಿರೂಪಕರೊಂದಿಗೆ ಮಾತನಾಡುತ್ತಾ “ಟಿ ನಟರಾಜನ್ ಮತ್ತು ಅವರ ಪತ್ನಿಗೆ ಅಭಿನಂದನೆಗಳು, ಅವರು ಇಂದು ಬೆಳಿಗ್ಗೆ ಮಗುವಿಗೆ ಜನ್ಮ ನೀಡಿದ್ದಾರೆ” ಎಂದು ವಾರ್ನರ್ ಸಂತೋಷ ವ್ಯಕ್ತಪಡಿಸಿದರು.