SRH vs LSG: ದಿಗ್ವೇಶ್ ರಾಠಿಗೆ ದಂಡದ ಜತೆಗೆ ಒಂದು ಪಂದ್ಯ ಅಮಾನತು ಶಿಕ್ಷೆ
ಇತ್ತೀಚೆಗಷ್ಟೇ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಇಂತಹದೇ ಸಂಭ್ರಮಕ್ಕಾಗಿ ದಿಗ್ವೇಶ್ ಅವರಿಗೆ ದಂಡ ಹಾಕಿ, ಒಂದು ಡಿಮೆರಿಟ್ ಪಾಯಿಂಟ್ ಕೂಡ ಕೊಡಲಾಗಿತ್ತು. ಬಳಿಕ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲೂ ಮತ್ತದೇ ಸಂಭ್ರಮ ಮಾಡಿದ್ದಕ್ಕಾಗಿ ದಂಡನೆಗೊಳಗಾಗಿದ್ದರು. ಇದೀಗ ಮೂರನೇ ಬಾರಿಯೂ ಇದೇ ತಪ್ಪು ಮಾಡಿ ದಂಡದ ಜತೆಗೆ ಒಂದು ಪಂದ್ಯಕ್ಕೆ ಅಮಾನತು ಮಾಡಲಾಗಿದೆ.


ಲಕ್ನೋ: ಮೂರನೇ ಬಾರಿಗೆ ಐಪಿಎಲ್(IPL 2025) ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಲಕ್ನೋ ಸೂಪರ್ ಜೈಂಟ್ಸ್ ಸ್ಪಿನ್ನರ್ ದಿಗ್ವೇಶ್ ರಾಠಿ(Digvesh Singh Rathi)ಗೆ ಒಂದು ಪಂದ್ಯದ ಅಮಾನತು ಮತ್ತು ಪಂದ್ಯ ಶುಲ್ಕದ 50 ಪ್ರತಿಶತ ದಂಡ ವಿಧಿಸಲಾಗಿದೆ. ಜತೆಗೆ ರಾಠಿ ಜತೆ ವಾಗ್ಯುದ್ಧ ನಡೆಸಿದ ಕಾರಣಕ್ಕೆ ಹೈದರಾಬಾದ್ ತಂಡದ ಅಭಿಷೇಕ್ ಶರ್ಮ(Abhishek Sharma)ಗೂ ಪಂದ್ಯ ಶುಲ್ಕದ 25 ಪ್ರತಿಶತ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಆಡಳಿತ ಮಂಡಳಿ ತಿಳಿಸಿದೆ.
ಅರ್ಧಶತಕ ಬಾರಿಸಿ ಉತ್ತಮವಾಗಿ ಆಡುತ್ತಿದ್ದ ಅಭಿಷೇಕ್‌ರ ವಿಕೆಟ್ ಕಿತ್ತ ರಾಠಿ ಸಂಭ್ರಮಾಚರಣೆ ನಡೆಸಿದ್ದಲ್ಲದೇ ಕೈ ಸನ್ನೆ ಮೂಲಕ ಮೈದಾನದಿಂದ ಹೊರಹೋಗುವಂತೆ ಸೂಚಿಸಿದ್ದರು. ಇದು ಅಭಿಷೇಕ್ ಕೋಪಕ್ಕೆ ಕಾರಣವಾಗಿತ್ತು. ಬಳಿಕ ಇಬ್ಬರು ಜಗಳಕ್ಕಿಳಿದರು. ಅಂಪೈರ್‌ಗಳು, ಸಹ ಆಟಗಾರರು ಇಬ್ಬರನ್ನೂ ಸಮಾಧಾನಪಡಿಸಿದರು. ಆದರೆ ಪಂದ್ಯದ ಬಳಿಕವೂ ಕೂಡ ಉಭಯ ಆಟಗಾರರು ಮತ್ತೆ ಕಿತ್ತಾಟ ನಡೆಸಿದರು. ಈ ವೇಳೆ ಉಭಯ ತಂಡಗಳ ಕೋಚ್ ಮತ್ತು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮಧ್ಯಪ್ರವೇಶಿಸಿ ಸಮಧಾನಪಡಿಸಿದ್ದರು. ಇದೀಗ ವಾಗ್ಯುದ್ಧ ನಡೆಸಿದ ಇಬ್ಬರಿಗೆ ದಂಡದ ಬಿಸಿ ಮುಟ್ಟಿಸಲಾಗಿದೆ.
DIGVESH RATHI SUSPENDED
— Red Dragon🐉 (@sr_haja) May 20, 2025
- Digvesh has been fined 50% of his match fees and suspended Vs GT
- Abhishek Sharma also fined 25%
Rules aren't same for everyone 🤧
Worst @BCCI 🤡🤡🤡 pic.twitter.com/Dx76PNcfI7
ಇತ್ತೀಚೆಗಷ್ಟೇ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಇಂತಹದೇ ಸಂಭ್ರಮಕ್ಕಾಗಿ ದಿಗ್ವೇಶ್ ಅವರಿಗೆ ದಂಡ ಹಾಕಿ, ಒಂದು ಡಿಮೆರಿಟ್ ಪಾಯಿಂಟ್ ಕೂಡ ಕೊಡಲಾಗಿತ್ತು. ಬಳಿಕ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲೂ ಮತ್ತದೇ ಸಂಭ್ರಮ ಮಾಡಿದ್ದಕ್ಕಾಗಿ ದಂಡನೆಗೊಳಗಾಗಿದ್ದರು. ಇದೀಗ ಮೂರನೇ ಬಾರಿಯೂ ಇದೇ ತಪ್ಪು ಮಾಡಿ ದಂಡದ ಜತೆಗೆ ಒಂದು ಪಂದ್ಯಕ್ಕೆ ಅಮಾನತು ಮಾಡಲಾಗಿದೆ. ಹೀಗಾಗಿ ಅವರು ಮೇ 22 ರಂದು ನಡೆಯುವ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವಂತಿಲ್ಲ.
ಇದನ್ನೂ ಓದಿ IPL 2025 Exit: ಪ್ಲೇ ಆಫ್‌ನಿಂದ 5 ತಂಡ ಔಟ್; ಉಳಿದ ಒಂದು ಸ್ಥಾನಕ್ಕೆ 2 ತಂಡಗಳ ಮಧ್ಯೆ ಫೈಟ್