Sunday, 22nd December 2024

Prithvi Shaw-ʻಇಂಥಾ ಕಾಮೆಂಟ್‌ಗಳನ್ನು ನಿಲ್ಲಿಸಿʼ: ಪೃಥ್ವಿ ಶಾಗೆ ಬೆಂಬಲಿಸಿ ಎಂಸಿಎಗೆ ಜತಿನ್‌ ಪರಂಜಾಪೆ ತಿರುಗೇಟು!

Jatin Paranjape defends Prithvi Shaw after MCA official’s recent remarks against him

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಆಟಗಾರರ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್‌ ಆಗಿದ್ದ ಹಾಗೂ ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯ ಮುಂಬೈ ತಂಡದಲ್ಲಿ ಸ್ಥಾನ ಕಳೆದುಕೊಂಡ ಯುವ ಸ್ಪೋಟಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾಗೆ (Prithvi Shaw) ಭಾರತೀಯ ಮಾಜಿ ಕ್ರಿಕೆಟಿಗ ಜತಿನ್‌ ಪರಂಜಾಪೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಯುವ ಬ್ಯಾಟ್ಸ್‌ಮನ್‌ ಬಗ್ಗೆ ಮುಂಬೈ ಕ್ರಿಕೆಟ್‌ ಅಸೋಸಿಯೇಷನ್‌ನ ಅಧಿಕಾರಿಯೊಬ್ಬರು ಈ ರೀತಿ ಅಸಂಬದ್ದ ಹೇಳಿಕೆಗಳನ್ನು ನೀಡಬಾರದಿತ್ತು ಎಂದು ಹೇಳಿದ್ದಾರೆ.

ಕಳೆದ ಎರಡು ತಿಂಗಳುಗಳಿಂದ ಮುಂಬೈ ಸ್ಪೋಟಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಐಪಿಎಲ್‌ ಟೂರ್ನಿಯಲ್ಲಿ ಅಲ್‌ಸೋಲ್ಡ್‌ ಆದ ಬಳಿಕ ಮಾಜಿ ಕ್ರಿಕೆಟಿಗರಿಗೆ ಪೃಥ್ವಿ ಶಾ ಚರ್ಚಾ ವಸ್ತುವಾಗಿದ್ದಾರೆ. ಅಲ್ಲದೆ ಮುಂಬೈ ತಂಡದಿಂದ ಅವರನ್ನು ಕೈ ಬಿಟ್ಟ ಬಳಿಕ ಪೃಥ್ವಿ ಶಾ ಹಾಗೂ ಮುಂಬೈ ಕ್ರಿಕೆಟ್‌ ಸಂಸ್ಥೆ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ.

ಶುಕ್ರವಾರ ಮುಂಬೈ ಕ್ರಿಕೆಟ್‌ ಅಸೋಸಿಯೇಷನ್‌ ಅಧಿಕಾರಿಯೊಬ್ಬರು ಮಾತನಾಡಿ,”ಪೃಥ್ವಿ ಶಾ ಅವರನ್ನು ಮರೆ ಮಾಚಲು ನಾವು ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿ 10 ಆಟಗಾರರೊಂದಿಗೆ ಆಡಿದ್ದೇವೆ. ಫೀಳ್ಡಿಂಗ್‌ ವೇಳೆ ಅವರ ಬಳಿ ಚೆಂಡು ಹೋದರೂ ಅದನ್ನು ಅವರಿಂದ ತಡೆಯಲು ತುಂಬಾ ಕಷ್ಟಪಡುತ್ತಿದ್ದರು. ಅವರ ಫಿಟ್ನೆಸ್‌, ಶಿಸ್ತು ಹಾಗೂ ನಡತೆ ಅತ್ಯಂತ ಕಳಪೆಯಾಗಿದೆ. ತಂಡದಲ್ಲಿ ಅವರಿಗೆ ಮಾತ್ರ ನಿಯಮವನ್ನು ರೂಪಿಸಲು ಸಾಧ್ಯವಿಲ್ಲ. ಎಲ್ಲರಿಗೂ ನಿಯಮ ಒಂದೇ,” ಎಂದು ತಿಳಿಸಿದ್ದರು.

ನಿತಿನ್‌ ಪರಂಜಾಪೆ ಹೇಳಿದ್ದೇನು?

ಎಂಸಿಎ ಅಧಿಕಾರಿಯ ಆರೋಪಗಳಿಗೆ ಇದೀಗ ಭಾರತೀಯ ಮಾಜಿ ಕ್ರಿಕೆಟಿಗ ಜತಿನ್‌ ಪರಂಜಾಪೆ ಅವರು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ ಹಾಗೂ ಯುವ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಅವರನ್ನು ಬೆಂಬಲಿಸಿದ್ದಾರೆ. ಬಲಗೈ ಬ್ಯಾಟ್ಸ್‌ಮನ್‌ಗೆ ಸಹಾಯ ಮಾಡಲು ಮುಂಬೈ ಕ್ರಿಕೆಟ್‌ ಸಂಸ್ಥೆಯಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಪೃಥ್ವಿ ಶಾ ಪಾಲಿಗೆ ಮುಂಬೈ ಪರ ಇದು ಕೊನೆಯ ಆವೃತ್ತಿಯಾಗಿದೆ ಎಂದು ಕಾಮೆಂಟ್‌ ಹಾಕಿದ್ದಾರೆ.

“ಎಂಸಿಎ ಅಧಿಕಾರಿಯೊಬ್ಬರು ಇಂಥಾ ಕೆಟ್ಟ ಕಾಮೆಂಟ್‌ಗಳು ನಿಜಕ್ಕೂ ಅನಿರೀಕ್ಷಿತವಾಗಿದೆ. ಇದನ್ನು ನೋಡುತ್ತಿದ್ದತರ, ಪೃಥ್ವಿ ಶಾಗೆ ಸಹಾಯ ಮಾಡುವ ರೀತಿ ಕಾಣಿಸುತ್ತಿಲ್ಲ. ಇದಕ್ಕೆ ಅವರ ಅರ್ಥ ʻಬೇಬಿಸಿಟ್‌ʼ? ಖಚಿತವಾಗಿಯೂ ಮುಂಬೈ ಪರ ಪೃಥ್ವಿ ಶಾ ಪಾಲಿಗೆ ಇದು ಕೊನೆಯ ಆವೃತ್ತಿಯಾಗಿದೆ,” ಎಂದು ಜತಿನ್‌ ಪರಂಜಾಪೆ ಪ್ರತಿಕ್ರಿಯಿಸಿದ್ದಾರೆ.

ಎಂಸಿಎಗೆ ತಿರುಗೇಟು ಕೊಟ್ಟಿದ್ದ ಪೃಥ್ವಿ ಶಾ

ಶುಕ್ರವಾರ ಎಂಸಿಎ ಅಧಿಕಾರಿಯೊಬ್ಬರು ಆರೋಪ ಮಾಡಿದ್ದ ಬೆನ್ನಲ್ಲೆ ಪೃಥ್ವಿ ಶಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಕ್ರಿಯಿಸಿದ್ದರು. ಸಂಪೂರ್ಣವಾಗಿ ನಿಮಗೆ ಅರ್ಥವಾಗದಿದ್ದರೆ, ಯಾವುದನ್ನೂ ಮಾತನಾಡಬಾರದು. ಅರ್ಧಂಬರ್ಧ ತಿಳಿದು ಮಾತನಾಡುವವರೇ ಇದ್ದಾರೆಂದು ತಿರುಗೇಟು ನೀಡಿದ್ದರು.

“ನಿಮಗೆ ಸಂಪೂರ್ಣವಾಗಿ ಅರ್ಥವಾಗದಿದ್ದರೆ, ಅದರ ಬಗ್ಗೆ ಮಾತನಾಡಬೇಡಿ. ಸಾಕಷ್ಟು ಜನರು ಅರ್ಧದಷ್ಟು ಸತ್ಯಗಳೊಂದಿಗೆ ಪೂರ್ಣ ಅಭಿಪ್ರಾಯಗಳನ್ನು ಹೊಂದಿದ್ದಾರೆ,” ಎಂದು ಪೃಥ್ವಿ ಶಾ ಸ್ಟೋರಿ ಹಾಕಿಕೊಂಡಿದ್ದರು.

ಈ ಸುದ್ದಿಯನ್ನು ಓದಿ: Prithvi Shaw: ‘ನಾನೇನು ತಪ್ಪು ಮಾಡಿದೆ?’; ಟ್ರೋಲ್‌ ಬಗ್ಗೆ ಬೇಸರ ವ್ಯಕ್ತಪಡಿಸಿದ ಪೃಥ್ವಿ ಶಾ