ನವದೆಹಲಿ: ಕಳೆದ ವಾರ ಕುಕ್ತಾಯ ಕಂಡಿದ್ದ ಪ್ಯಾರಿಸ್ ಪ್ಯಾರಾಲಿಂಪಿಕ್ಸ್(Paralympic 2024) ಜಾವೆಲಿನ್ ಎಸೆತದಲ್ಲಿ ಗೆದ್ದ ಚಿನ್ನದ ಪದಕವನ್ನು ಸುಮಿತ್ ಅಂಟಿಲ್(Sumit Antil) ಅವರು ಪ್ರಧಾನಿ ನರೇಂದ್ರ ಮೋದಿ(PM Modi) ಅವರಿಗೆ ಅರ್ಪಿಸಿದ್ದಾರೆ. ಪ್ಯಾರಿಸ್‌ಗೆ ತೆರಳುವ ಮುನ್ನವೇ ಅಂಟಿಲ್ ಅವರು ಪದಕ ಗೆಲ್ಲುವುದಾಗಿ ಮೋಧಿಗೆ ಭರವಸೆ ನೀಡಿದ್ದರು. ಅದರಂತೆ ಅವರು ಪದಕ ಕೂಡ ಗೆದ್ದರು.
“ಇದು ನನ್ನ ಸತತ 2ನೇ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ. ಟೋಕಿಯೊ ಒಲಿಂಪಿಕ್ಸ್ ವೇಳೆ ನಾನು 2 ಚಿನ್ನದ ಪದಕಗಳನ್ನು ಗೆಲ್ಲುವುದಾಗಿ ನಿಮ್ಮೊಂದಿಗೆ ಹೇಳಿದ್ದೆ. ಹೀಗಾಗಿ ಈ ಪದಕ ನಿಮಗೆ” ಎಂದು ಹೇಳುವ ಮೂಲಕ ಪದಕವನ್ನು ಮೋದಿ ಅವರಿಗೆ ಅರ್ಪಿಸಿದರು. ಟೋಕಿಯೊದಲ್ಲಿ ಚಿನ್ನ ಗೆದಿದ್ದ ನೀರಜ್ ಚೋಪ್ರಾ ಅಂದು ಮೋದಿ ಭೇಟಿ ವೇಳೆ ತಮ್ಮ ಜಾವೆಲಿನ್ ಅನ್ನು ಉಡುಗೊರೆಯಾಗಿ ನೀಡಿದ್ದರು.
26 ವರ್ಷದ ಸುಮಿತ್ ಪ್ಯಾರಾಲಿಂಪಿಕ್ಸ್‌ನಲ್ಲಿ 2 ಚಿನ್ನ ಗೆದ್ದ ಭಾರತದ 3ನೇ ಕ್ರೀಡಾಪಟು. ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಿದ್ದರು. 7 ವರ್ಷದವರಿದ್ದಾಗ ತಂದೆ ರಾಜ್‌ಕುಮಾರ್‌ರನ್ನು ಕಳೆದುಕೊಂಡಿದ್ದದ್ದ ಸುಮಿತ್ ಆರಂಭದಲ್ಲಿ ತಂದೆಯತೆ ತಾವೂ ಸೈನಿಕರಾಗಬೇಕೆಂದು ಬಯಸಿದ್ದರು. ಆದರೆ, 2015ರಲ್ಲಿ ನಡೆದ ಬೈಕ್ ಅಪಘಾತವೊದು ಸುಮಿತ್ ಅವರ ಬದುಕಿನ ದುರಂತವೊಂದಕ್ಕೆ ಕಾರಣವಾಯಿತು. ಪರಿಣಾಮ ಎಡಗಾಲಿನ ಮಂಡಿಯ ಕೆಳಭಾಗ ಕತ್ತರಿಸಿಹೋಯಿತು. ಹಾಗೆಂದು ಅವರು ಸುಮ್ಮನೆ ಕುಳಿತುಕೊಳ್ಳಲಿಲ್ಲ. 2017ರಲ್ಲಿ ಪ್ಯಾರಾ ಅತ್ಲೆಟಿಕ್ಸ್ ಶುರು ಮಾಡಿದರು. ಒಟ್ಟಾರೆ ಸುಮಿತ್ ಇದುವರೆಗೆ ಪ್ಯಾರಾಲಿಂಪಿಕ್ಸ್‌ನಲ್ಲಿ 2 ಚಿನ್ನ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 2 ಹಾಗೂ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲೂ 1 ಚಿನ್ನ ಗೆದ್ದಿದ್ದಾರೆ.
ಇದನ್ನೂ ಓದಿ PM Narendra Modi: ಇಂದು ಜಮ್ಮು ಕಾಶ್ಮೀರದ ದೋಡಾದಲ್ಲಿ ಪ್ರಧಾನ ಮಂತ್ರಿ ಮೋದಿ ಚುನಾವಣಾ ರ‍್ಯಾಲಿ
ಪ್ರಧಾನಿ ಮೋದಿ ಅವರ ನಿವಾಸದಲ್ಲಿ ನಡೆದಿದ್ದ ಸಂವಾದ ಕಾರ್ಯಕ್ರಮದಲ್ಲಿ ಪದಕ ಗೆದ್ದ ಕ್ರೀಡಾಪಟುಗಳು ತಮ್ಮ ಸಾಧನೆಯ ಬಗ್ಗೆ ಮೋದಿ ಜತೆ ಮುಕ್ತವಾಗಿ ಮಾತನಾಡಿದ್ದರು. ಈ ವೇಳೆ ಶೂಟರ್ ಅವನಿ ಲೇಖರಾ ಅವರು “ಧನ್ಯವಾದಗಳು’ ಎಂದು ಬರೆದಿರುವ ಜೆರ್ಸಿಯೊಂದನ್ನು ಮೋದಿ ಅವರಿಗೆ ಉಡುಗೊರೆಯಾಗಿ ನೀಡಿದ್ದರು.
ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದ, ನವದೀಪ್ ಸಿಂಗ್ ಅವರಿಗಾಗಿ ಮೋದಿ ನೆಲದ ಮೇಲೆ ಕುಳಿತದ್ದು ವಿಶೇಷವಾಗಿತ್ತು. ನವದೀಪ್ ಅವರು ಮೋದಿಯವರಿಗೆ ಟೋಪಿಯೊಂದನ್ನು ಹಾಕಿ ಸಂಭ್ರಮಿಸಿದ್ದರು. ಈ ವೀಡಿಯೊ ವೈರಲ್ ಭಾರೀ ವೈರಲ್ ಆಗಿತ್ತು. ಪ್ರಧಾನಿ ನಡೆಗೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿತ್ತು.