ನವದೆಹಲಿ: ಭಾರತದ ಮಾಜಿ ಆಟಗಾರ ಸುನಿಲ್ ಗಾವಸ್ಕರ್ ಅವರು ಇದೀಗ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ವಿರುದ್ಧ ಅಸಭ್ಯ ಪದ ಬಳಕೆ ಮಾಡುವ ಮೂಲಕ ಬಹುತೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ 6ನೇ ಪಂದ್ಯದ ವೇಳೆ ಕೆಟ್ಟ ಪದ ಬಳಕೆ ಮಾಡಿರುವ ಗಾವಸ್ಕರ್ ಅವರನ್ನು ಕಾಮೆಂಟರಿ ಪ್ಯಾನೆಲ್ನಿಂದಲೇ ಕಿತ್ತು ಎಸೆಯಿರಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕಾ ಪ್ರಹಾರ ನಡೆಯುತ್ತಿದೆ.
ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಿನ್ನೆ ನಡೆದ ರಾಯಲ್ ಚಾಲೆಂಜರ್ಸ್-ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಕಾಮೆಂಟರಿ ನೀಡುತ್ತಿದ್ದ ಗಾವಸ್ಕರ್, ಕೊಹ್ಲಿ ಕುರಿತು, ’ಲಾಕ್ಡೌನ್ ಸಮಯದಲ್ಲಿ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಚೆಂಡುಗಳ ವಿರುದ್ಧ ಮಾತ್ರ ಅಭ್ಯಾಸ ಮಾಡಿದ್ದಾರ”(ಇನ್ ಹೋನೆ ಲಾಕ್ಡೌನ್ ಮೇ ತೊ ಅನುಷ್ಕಾ ಕಿ ಗೇಂದೋಂಕಾ ಪ್ರಾಕ್ಟೀಸ್ ಕೀ ಹೈ) ಅಸಭ್ಯ ಕಮೆಂಟ್ ಮಾಡಿದ್ದಾರೆ.