Sunday, 15th December 2024

ಸನ್‌ರೈಸ್ ಗೆಲುವಿಗೆ 209 ರನ್ ಗುರಿ

*ಕ್ವಿಂಟನ್ ಡಿ’ಕಾಕ್ ಅರ್ಧಶತಕ
*ಮಿಂಚಿನ ಆಟ ಪ್ರದರ್ಶಿಸಿದ ಇಶಾನ್, ಪಾಂಡ್ಯ ಬ್ರದರ್ಸ್‌, ಪೋಲಾರ್ಡ್‌

ಶಾರ್ಜಾ: ರೋಹಿತ್ ಶರ್ಮಾ ಸಿಕ್ಸರ್‌ ಹೊಡೆದು ಮುಂಬೈ ಇಂಡಿಯನ್ಸ್‌ ಲೆಕ್ಕಾಚಾರ ಒಂದು ತಲೆಕೆಳ ಗಾದರೂ, ಕೀಪರ್‌ ಕ್ವಿಂಟನ್‌ ಡಿಕಾಕ್ ಅವರ ಅರ್ಧಶತಕ ಹಾಗೂ ಕೊನೆಯಲ್ಲಿ ಕೃಣಾಲ್ ಪಾಂಡ್ಯ ಅವರ ಸ್ಪೋಟಕ ಬ್ಯಾಟಿಂಗ್ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದೆ.

ಈ ಮೂಲಕ ವಾರ್ನರ್‌ ಪಡೆಗೆ ಗೆಲುವಿಗೆ 209 ರನ್‌ ನಿಗದಿ ಮಾಡಿದೆ. ಸ್ಪಿನ್ನರ್‌ ರಶೀದ್‌ ಖಾನ್‌ ನಿಯಂತ್ರಿತ ಬೌಲಿಂಗ್ ನಡೆಸಿ, ಒಂದು ವಿಕೆಟ್ ಕಿತ್ತರು. ಬಾಕಿ ಬೌಲರುಗಳು ದುಬಾರಿ ಎನಿಸಿದರು.